ಕೈಕಂಬ:ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ) ಕೈಕಂಬ ಎಡಪದವು ವಲಯ ಸಮಿತಿಯ ಮಹಾಸಭೆಯು ಡಿ.30 ರಂದು ಶ್ರೀ ರಾಮ್ ಸಭಾಂಗಣ ಮಂಜುಶ್ರೀ ಕಾಂಪ್ಲೆಕ್ಸ್ ಕೈಕಂಬದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗರು ನಾರಾಯಣ ಸಾಲ್ಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹೊಟೇಲ್ ಉದ್ಯಮಿ ಹಾಗೂ ಶ್ರೀ ರಾಮ್ ಸಭಾಂಗಣದ ಮಾಲಕ ಹರಿರಾವ್, ಕೆ.ಎಸ್.ಟಿ.ಎ ಜಲ್ಲಾ ಸಮಿತಿಯ ಅಧಕ್ಷ ಪ್ರಜ್ವಲ್ ಕುಮಾರ್, ಸದಸ್ಯರಾದ ಎ.ರಾಘವ ಕೈಕಂಬ, ಕ್ಷೇತ್ರ ಸಮಿತಿಯ ಅಧಕ್ಷರಾದ ಕೇಶವ ಕೆ., ಕೋಶಾಧಿಕಾರಿಗಳಾದ ರಮೇಶ್ ಕಾಜಿಲ ಕೋಡಿ, ಸತ್ಯಭಾಮ ಡಿ.ರಾವ್, ಸುಧಾಕರ ಮಳಲಿ, ಉಪಸ್ಥಿತರಿದ್ದರು.
ಮುಖ್ಯ ಕಾರ್ಯದರ್ಶಿ ಶೈನಾ ಜಯರಾಜ್ ಕಾರ್ಯಕ್ರಮದ ವರದಿ ವಾಚಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾದ ಹೊಟೇಲ್ ಉದ್ಯಮಿ ಶ್ರೀ ಹರಿರಾವ್, ವೃತ್ತಿಬಾಂಧವರಾದ ಸದಾಶಿವ ಕೆ. ಹಾಗೂ ಪುಷ್ಪಾ ಎಸ್ ಕರ್ಕೆರಾ ಇವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವೃತ್ತಿ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕೈಕಂಬವಲಯ ಸಮಿತಿಯ ಪುನಾರಚನೆಯ ಅಧ್ಯಕ್ಷರಾಗಿ ಸತ್ಯಭಾಮ ಡಿ.ರಾವ್, ಮುಖ್ಯ ಕಾರ್ಯದರ್ಶಿಯಾಗಿ ಮಮತಾ ದೇವಾಡಿಗ, ಕೋಶಾಧಿಕಾರಿಯಗಿ ಡೊಂಬಯ್ಯ ಅಮ್ಮುಂಜೆ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಸಭಿಕರಿಗೆ ವಿವಿಧ ಬಗೆಯ ಆಟೋಟಗಳು ಹಾಗೂ ಬಹುಮಾನ ವಿತರಣೆ ನಡೆಯಿತು. ಕುಮಾರ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಕೇಶವ್ ಅಮ್ಮುಂಜೆ ಧನ್ಯವಾದ ವಿತ್ತರು.



