ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ 9ನೇ ಜೈನ್‍ಪೇಟೆ ವಾರ್ಡ್‍ನಲ್ಲಿ ಎಸ್. ಎಫ್. ಸಿ ಅನುದಾನದಿಂದ ರೂ 7.5 ಲಕ್ಷದಲ್ಲಿ ಅಮ್ಮನವರ ಬಸದಿ, ರಾಮ ಮಂದಿರ-ದೇವಾಡಿಗರ ಸಂಘದ ಬಳಿ ಇಂಟರ್ ಲಾಕ್, ಕಾಳಿಕಾಂಬ ದೇವಸ್ಥಾನ, ಸಾವಿರ ಕಂಬದ ಬಸದಿ-ನಾಗಪ್ಪ ಓಣಿಗೆ ಕಾಂಕ್ರೇಟ್ ಚರಂಡಿಗೆ ಅನುದಾನ ಬಿಡುಗಡೆಯಾಗಿದೆ.

Jainpete Interlock
ಅಮ್ಮನವರ ಬಸದಿಯ ಮುಂಭಾಗದಲ್ಲಿ ಇಂಟರ್‍ಲಾಕ್ ಅಳವಡಿಸುವ ಕಾಮಗಾರಿಗೆ ಜಯವರ್ಮ ಇಂದ್ರ, ವಾರ್ಡ್ ಸದಸ್ಯ ಎಂ. ಬಾಹುಬಲಿ ಪ್ರಸಾದ್ ಕಾಮಗಾರಿಗೆ ಚಾಲನೆ ನೀಡಿದರು.
ಎಂ. ಬಾಹುಬಲಿ ಪ್ರಸಾದ್ 9ನೇ ಜೈನ್ ಪೇಟೆ ವಾರ್ಡಿನಲ್ಲಿ ಕಾಂಕ್ರೇಟ್ ರಸ್ತೆ, ಇಂಟರ್ ಲಾಕ್ ರಸ್ತೆ, ದಾರಿದೀಪದ ವ್ಯವಸ್ಥೆ ಇದ್ದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸುವುದರಲ್ಲಿ ತೃಪ್ತಿ ವ್ಯಕ್ತಪಡಿಸಿದರು. ಇನ್ನೂ ಹೆಚ್ಚಿನ ಈ ವಾರ್ಡಿನ ಅಭಿವೃದ್ಧಿಗೆ ಶಾಸಕರಾದ ಉಮಾನಾಥ ಎ. ಕೋಟ್ಯಾನ್‍ರವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ವಕೀಲ ಕೆ. ಆರ್. ಪಂಡಿತ್. ಸ್ಥಳೀಯರಾದ ಅನಿಲ್ ಕುಮಾರ್ ಇಂದ್ರ, ಸುದರ್ಶನ್ ಜೈನ್, ಯಶೋಧರ, ವಿದ್ಯಾ, ಪ್ರಕಾಶ್ ಜೈನ್, ಪ್ರಣಾಮ್ ಎಂ. ಬಿ., ಫಣಿರಾಜ ಇಂದ್ರ, ಪದ್ಮಶ್ರೀ, ಗೀತಾ ಆಚಾರ್ಯ, ಪದ್ಮ ಸಂಗೀತ, ಸುಜಾತ ದೇವಾಡಿಗ, ಗುತ್ತಿಗೆದಾರ ರವಿಶಂಕರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *