ಮೂಡುಬಿದಿರೆ: ಇಲ್ಲಿನ ವಕೀಲರ ಸಂಘದ ವತಿಯಿಂದ ಮೂಡುಬಿದಿರೆ ವಕೀಲರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರಿಗೆ ಮೆಡ್ ಇನ್ನೋವ್ 8 ಹಾಗೂ ಡೆಲ್ಟಾ ಕೇರ್ ಹಾಸ್ಪಿಟಲ್ ವತಿಯಿಂದ ನಡೆದ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಮೂಡುಬಿದಿರೆ ನ್ಯಾಯಾಲಯದ ನ್ಯಾಯಾದೀಶರಾದ ಯಶವಂತ ಕುಮಾರ್‍ರವರು ಉದ್ಘಾಟಿಸಿದರು.

court Heath Camp
ಮೆಡ್ ಇನ್ನೋವ್ 8 ಮುಖ್ಯಸ್ಥ ಅಬೂಬಕ್ಕರ್‍ರವರು ಆರೋಗ್ಯ ತಪಾಸಣೆ ಬಗ್ಗೆ ಮಾಹಿತಿ ನೀಡಿದರು. ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆವಹಿಸಿದರು. ಸಹಾಯಕ ಸರಕಾರಿ ಅಭಿಯೋಜಕ ಶೋಭಾ ನಾಯಕ್, ಡೆಲ್ಟಾ ಕೇರ್ ಹಾಸ್ಪಿಟಲ್‍ನ ಮುಖ್ಯಸ್ಥೆ ಲಕ್ಷ್ಮೀ, ವಕೀಲರ ಸಂಘದ ಕಾರ್ಯದರ್ಶಿ ಹರೀಶ್ ಪಿ.ಉಪಸ್ಥಿತರಿದ್ದರು. ಉಪಾಧ್ಯಕ್ಷನಾಗೇಶ್ ಶೆಟ್ಟಿ ಡಿ. ಸ್ವಾಗತಿಸಿದರು, ಕೋಶಾಧಿಕಾರಿ ಪದ್ಮಪ್ರಸಾದ್ ಜೈನ್ ವಂದಿಸಿದರು. ಜತೆ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *