ಮೂಡುಬಿದಿರೆ: ಸ್ವಯಂ ಪ್ರೇರಿತ ಸೇವೆಯೇ ನಿತ್ಯ ಸಾಧನೆ. ಸ್ವಯಂಸೇವೆಯಿಂದ ಧರ್ಮರಕ್ಷಣೆಯ ಜೊತೆಗೆ ಸಮಾಜದ ರಕ್ಷಣೆಯಾಗಬೇಕು. ಸ್ವಯಂಸೇವೆ ವ್ಯಕ್ತಿತ್ವ ನಿರ್ಮಾಣ ಮಾಡಿದರೆ, ಸ್ವಸಹಾಯ ಸಂಘಗಳು ಸಂಸಾರ, ಸಮಾಜವನ್ನು ಕಟ್ಟುವಂತಹ ಕೆಲಸವನ್ನು ಮಾಡುತ್ತೀವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕರ್ನಾಟಕ ಜೈನ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್‍ನ ಆಶ್ರಯದಲ್ಲಿ ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಸಹಾಯ ಸಂಘದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕುಟುಂಬವನ್ನು ಧರ್ಮದ ಸಾಕ್ಷಿಯಾಗಿ ಮುನ್ನಡೆಸುವ ಕೆಲಸ ಮಹಿಳೆಯರಿಂದ ಸಾಧ್ಯ.

Swsahaya Sanghaಸ್ವಸಹಾಯ ಗುಂಪುಗಳಿಂದ ಮಹಿಳೆಯರಲ್ಲಿ ಸ್ವಾಭಿಮಾನದ ಬದುಕು ನಿರ್ಮಾಣವಾಗಿರುವುದು ಮಾತ್ರವಲ್ಲದೆ, ಆರ್ಥಿಕ, ಸಾಮಾಜಿಕ ಜೀವನಮಟ್ಟವು ಸುಧಾರಣೆಯಾಗಿದೆ ಎಂದರು.
ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಬೇರೆ ಬೇರೆ ಸಮುದಾಯದವರೊಂದಿಗೆ ಜೈನ ಸಮುದಾಯವು ಕೂಡ ಪ್ರಗತಿ ಕಾಣಬೇಕು. ರಾಜಕಾರಣಿಗಳನ್ನು, ಮೇಲ್ವರ್ಗದಲ್ಲಿರುವ ಅಧಿಕಾರಿಗಳನ್ನು ನಕಾರತ್ಮಕವಾಗಿ ನೋಡುವ ನಮ್ಮ ಮನಸ್ಥಿತಿ ಬದಲಾಗಬೇಕು. ಜೈನ ಸಮುದಾಯಕ್ಕೆ ಹಿಂದೆ, ಈಗ, ಮುಂದೆ ಕೂಡ ಸರ್ಕಾರವು ಸಹಕಾರ ನೀಡುತ್ತದೆ ಎನ್ನುವ ಭರವಸೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷತೆವಹಿಸಿ, ಸ್ವಸಹಾಯ ಸಂಘಗಳ ಸ್ಥಾಪನೆಯಿಂದಾಗಿ ಮಹಿಳೆಯರಲ್ಲಿ ಸಮಾನತೆಯ ಭಾವ ಮೂಡಿದೆ ಎಂದರು.
ಜೈನ ಸಮುದಾಯದ ನಿಗಮ ಸ್ಥಾಪನೆ, ಟುಬಿಗೆ ವರ್ಗಕ್ಕೆ ಸೇರಿಸುವುದು ಸಹಿತ ಹಲವು ಬೇಡಿಕೆಗಳ ಹಕ್ಕೋತ್ತಾಯ ಮಂಡನೆ ಮಾಡಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮುದಾಯ ಪ್ರಮುಖರು ಸೇರಿ ಟ್ರಸ್ಟ್ ಸ್ಥಾಪಿಸುವ ಮೂಲಕ ಸಮಾಜವನ್ನು ಮುನ್ನಡೆಸುವ ಕೆಲಸ ಶ್ಲಾಘನೀಯ. ಪ್ರಸ್ತುತ ನಾನು ರಾಜ್ಯ ಹಿಂದುಳಿದು ವರ್ಗ, ಅಲ್ಪಸಂಖ್ಯಾತ ಸಮಿತಿಯ ಸದಸ್ಯನಾಗಿರುವುದರಿಂದ ಜೈನ ಸಮುದಾಯದ ಬೇಡಿಕೆಗಳನ್ನು ಮುಂದಿನ ಸಭೆಯಲ್ಲಿ ಸರ್ಕಾರದ ಮುಂದಿಡುತ್ತೇನೆ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್,, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ, ದ.ಕ ಜಿಲ್ಲೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮಾಹಿತಿ ಸಂಚಾಲಕ ಅಬ್ದುಲ್ ಖಾದರ್, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಸಂಘದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸಲಹಾ ಸಮಿತಿ ಅಧ್ಯಕ್ಷೆ ಶ್ವೇತಾ ಪ್ರವೀಣ್, ಸಂಚಾಲಕ ಸುದೀಪ್ ಜೈನ್, ಸ್ವಸಹಾಯ ಸಂಘಗಳ ಮೇಲ್ವಿಚಾರಕ ಶಿವರಾಜ್ ಜೈನ್,ಕರ್ನಾಟಕ ಜೈನ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ನೇಮಿರಾಜ್ ಆರಿಗ, ಟ್ರಸ್ಟಿಗಳಾದ ಎ.ವಿ ಶೆಟ್ಟಿ ಧರ್ಮಸ್ಥಳ, ಶಶಿಕಿರಣ್. ಶಮಂತ್ ಕುಮಾರ್ ಜೈನ್. ಸುಜಾತ ಎನ್.ಆರಿಗ ಉಪಸ್ಥಿತರಿದ್ದರು.
ಸಮಾವೇಶದ ಶಮಂತ್ ಕುಮಾರ್ ಜೈನ್, ಅಂತಾರಾಷ್ಟ್ರೀಯ ಕರಾಟೆ ಸಾಧಕ ಸುಪಾಶ್ರ್ವ ಕೊಂಬೆ, ರಾಷ್ಟ್ರಪ್ರಶಸ್ತಿ ಪುರಸ್ಕøತ ಪ್ರತಿಭೆ ಪಂಚಮಿ ಮಾರೂರು, ಮಂಗಳೂರು ಎಪಿಎಂಸಿ ನೂತನ ಅಧ್ಯಕ್ಷ ಪ್ರವೀಣ್ ಜೈನ್. ಕಾರ್ಕಳ ಎಪಿಎಂಸಿ ಅಧ್ಯಕ್ಷ ಮಪಾಲು ಜಯವರ್ಮ ಜೈನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಹನಾ ಸಂಪತ್ ಸ್ವಾಗತಿಸಿದರು. ಜೀವಿತಾ, ಅಭಿಲಾಷಾ ಕಾರ್ಯಕ್ರಮ ನಿರೂಪಿಸಿದರು. ತ್ರಿಶಾಲ ವಂದಿಸಿದರು.

By suddi9

Leave a Reply

Your email address will not be published. Required fields are marked *