ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ಆಶ್ರಯದಲ್ಲಿ 8ನೇ ವರ್ಷದ ಸಾಂಸ್ಕøತಿಕ ಕಲರವ ರಾರಾಸಂಭ್ರಮ-2018 ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆಯಿತು. ಮಡಂತ್ಯಾರುವಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಕಚೇರಿ ಅಧೀಕ್ಷಕ ಬಿ.ವಿ.ಡಿ.ಆಲ್ಮೇಡಾ ಕಾರ್ಯಕ್ರಮ ಉದ್ಘಾಟಿಸಿದರು. ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಚೆನ್ನಕೇಶವ ಮಾಸ್ತರ್, ಉಪನ್ಯಾಸಕ ದಾಮೋದರ ಇ, ಪುರಸಭಾ ಸದಸ್ಯ ಹರಿಪ್ರಸಾದ್ ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ತಂದೆ ತಾಯಿಯ ಪ್ರೋತ್ಸಾಹ ಇದ್ದಾಗ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ರಾರಾಸಂಭ್ರಮ ಕಾರ್ಯಕ್ರಮದಲ್ಲಿ ಇಷ್ಟು ಸಂಖ್ಯೆಯಲ್ಲಿ ಚಿಕ್ಕ ಮಕ್ಕಳು ಪಾಲ್ಗೊಳ್ಳಲು ಅವರ ತಾಯಂದಿರ ಪ್ರೋತ್ಸಾಹವೇ ಕಾರಣವಾಗಿದೆ. ಮಕ್ಕಳ ಪ್ರತಿಭಾ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಕಾರ್ರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಚೆಸ್ಆಟಗಾರ್ತಿ ಯಶಸ್ವಿ ಕೆ. ಅವರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ಓಂ ಪ್ರಸಾದ್, ಕೇಶವ ಬಂಟ್ವಾಳ್, ಮೋಹನ್ ಚೌದರಿ, ಭಾಸ್ಕರ ಸಿ. ಮೂಲ್ಯ, ಜೇಸಿಐ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಯತೀಶ್ ಕರ್ಕೇರಾ, ಕುಲಾಲ ಯುವ ವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಐವನ್ ಫೆರ್ನಾಂಡೀಸ್, ವಸಂತ ಪೂಜಾರಿ ಭಾಗವಹಿಸಿದ್ದರು. ಮಕ್ಕಳಿಗೆ ಹಾಗೂ ಮುಕ್ತ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ, ಅದೃಷ್ಟ ಪುಟಾಣಿ, ಚಿತ್ರಕಲಾ ಸ್ಪರ್ಧೆ, ಕೈ ಬರಹ ಸ್ಪರ್ಧೆ, ಪುಟಾಣಿ ಪಂಟರ್, ಕವನ ರಚನೆ ಸ್ಪರ್ಧೆ, ಏಕಪಾತ್ರಭಿನಯ, ಛದ್ಮ ವೇಷ ಸ್ಪರ್ಧೆಗಳು ನಡೆದವು. ಮಕ್ಕಳೊಂದಿಗೆ ಅವರ ಪೋಷಕರು ಪಾಲ್ಗೊಂಡು ಸಂಭ್ರಮಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್, ಸುರತ್ಕಲ್ನ ರಿದಂ ಸಾಂಸ್ಕøತಿಕ ವಿಕಾಸ ಕೇಂದ್ರದ ಅಧ್ಯಕ್ಷ ಸುಧಾಕರ ಸಾಲ್ಯಾನ್, ಗೋಪಾಲ ಅಂಚನ್, ಚೆನ್ನಕೇಶವ, ಮರಳಿಕೃಷ್ಣ ರಾವ್ ತೀರ್ಪುಗಾರರಾಗಿ ಪಾಲ್ಗೊಂಡರು .ರಾರಾಸಂ ಪ್ರತಿಷ್ಠಾನದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ನಿರ್ದೇಶಕರಾದ ದಾಮೋದರ ಏರ್ಯ, ದಿವ್ಯರಾಣಿ, ಜಲಜಾಕ್ಷಿ ಕುಲಾಲ್ ಉಪಸ್ಥಿತರಿದ್ದರು. ಕೇಶವ ಮಾಸ್ತರ್ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕ ನಾಗೇಶ್ ಬಾಳೆಹಿತ್ಲು ವಂದಿಸಿದರು. ತುಳಿಸಿದಾಸ್ ಪೈ ನಿರೂಪಿಸಿದರು.
ಚಿತ್ರ: ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಚೆಸ್ಆಟಗಾರ್ತಿ ಯಶಸ್ವಿ ಕೆ. ಅವರನ್ನು ಸನ್ಮಾನಿಸಲಾಯಿತು.
