ಬಡಗಬೆಳ್ಳೂರು: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಡಿ. 29ರಂದು ಶನಿವಾರ ನಡೆಯಲಿದೆ. ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ತುಳು ನಾಟಕ “ಕೋಟಿ ಚೆನ್ನಯ”ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ “ರಾಮ ರಾಮ ಶ್ರೀ ರಾಮ” ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ.
ಅಭಿನಂದನಾ ಸಮಾರಂಭ:
ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲಾವಾರು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈದೀಗ ನಿವೃತಿ ಹೊಂದಿರುವ ಶ್ರೀಮತಿ ಬಿ. ಮೋಹಿನಿ ಇವರನ್ನು ಅಭಿನಂದ ನಾ ಸಮಾರಂಭವು ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಟಿ ಗಿರೀಶ್ಚಂದ್ರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಭಾಗವಹಿಸಲಿದ್ದಾರೆ.
ಅಭಿನಂದನಾ ಭಾಷಣವನ್ನು ಶ್ರೀಮತಿ ರಾಜಲಕ್ಷ್ಮಿ ಬೆಳ್ಳೂರು ಮಾಡಲಿದ್ದಾರೆ.ಶಾಲಾ ಮುಖ್ಯೋಪಾಧ್ಯಾಯ ಕೇಶವ ನಾಯ್ಕ ಎ. ಶಾಲಾ ಸಂಚಾಲಕ ಕೆ. ನರೇಂದ್ರನಾಥ ಭಂಡಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚೀಂದ್ರನಾಥ ರೈ, ಶಾಲಾ ನಾಯಕಿ ಕು.ಹರ್ಷ ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿರುವರು.
