ಪೊಳಲಿ: ಎಸ್ ಆರ್ ಫ್ರೆಂಡ್ಸ್ ಪೊಳಲಿ ನೂತನವಾಗಿ ನಿರ್ಮಿಸಿದ ಪೊಳಲಿ ಪ್ರಯಾಣಿಕರ ತಂಗುದಾಣ ಇದರ ಉದ್ಘಾಟನಾ ಸಮಾರಂಭವು ಡಿ.30ರಂದು ಭಾನುವಾರ ನಡೆಯಲಿದೆ
ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಉದ್ಘಾಟಿಸಿ ಆಶೀರ್ವದಿಸಲಿದ್ದಾರೆ.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪರ್ದಕಂಡ ವಾಸುದೇವ ಭಟ್ ಪೊಳಲಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ಕರಿಯಂಗಳ ಗ್ರಾ. ಪಂ. ಪಿಡಿಓ ಪದ್ಮ ನಾಯಕ್, ತಾ.ಪಂ.ಸದಸ್ಯ ಯಶವಂತ ಪೂಜಾರಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ,ಉಧ್ಯಮಿಗಳಾದ ಜಯರಾಮ್‍ಕೃಷ್ಣ ಪೊಳಲಿ, ಭುವನೇಶ್ ಕೋಟ್ಯಾನ್ ಪಚಿನಡ್ಕ, ವೆಂಕಟೇಶ್ ನಾವಡ ಪೊಳಲಿ,   ಗ್ರಾ.ಪಂ.ಸದಸ್ಯ  ಹಾಗೂ ಎಸ್ ಆರ್ ಫ್ರೆಂಡ್ಸ್  ಅಧ್ಯಕ್ಷ  ಲೋಕೇಶ್  ಭರಣಿ, ಕಾರ್ಯದರ್ಶಿ  ರಾಜೇಶ್ ಪಡ್ಪು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಎಸ್ ಆರ್ ಫ್ರೆಂಡ್ಸ್ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *