ಬಂಟ್ವಾಳ : ಬಿ.ಸಿ.ರೋಡ್ ನಲ್ಲಿ ಆಯೋಜಿಸಿದ್ದ ಕರಾವಳಿ ಕಲೋತ್ಸವ-2018 ರ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಜರಗಿದ ಆಧ್ಯಾತ್ಮಿಕ ರಾಜಯೋಗ ಶಿಕ್ಷಣವುಳ್ಳ ಮೌಲ್ಯಾಧಾರಿತ ಚಿತ್ರಪಟ ಪ್ರದರ್ಶನ ದ ಉದ್ಘಾಟನೆಯನ್ನು ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಾವಿತ್ರಿ, ಬ್ರಹ್ಮಕುಮಾರ್ ಗಣಪತಿ ಭಟ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ಬಂ.ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ದೇವಂದಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಸತಿ ಹಾಗೂ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರಿಗೆ ಸೇವಾಕೇಂದ್ರದ ಸಂಯೋಜಕ ಬ್ರಹ್ಮಕುಮಾರ್ ಗಣಪತಿ ಭಟ್ ಈಶ್ವರಿಯ ಉಡುಗೊರೆಯನ್ನು ನೀಡಲಾಯಿತು.

