ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ದೇಶದ ಮಾಜಿ ಪ್ರಧಾನ ಮಂತ್ರಿ ಶ್ರೀ ಅಟಲ್ ಜೀ ಯವರ 94ನೇ ವರ್ಷದ ಜನ್ಮ ದಿನಾಚರಣೆಯನ್ನು ‘’ಸುಶಾಸನ ದಿನ’’ ವನ್ನು ಕ್ಷೇತ್ರದ ಬಿ.ಜೆ.ಪಿ ಕಛೇರಿಯಲ್ಲಿ ಡಿ.25 ರಂದು ಮಂಗಳವಾರ ನಡೆಸಲಾಯಿತು.
ಅಟಲ್ ಜೀ ಯವರ ಬಗ್ಗೆ ಜಿಲ್ಲಾ ಬಿ.ಜೆ.ಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ ಯವರು ವಹಿಸಿದರು. ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ ಉಪಸ್ಥಿತರಿದ್ದರು ಕ್ಷೇತ್ರ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ಸ್ವಾಗತಿಸಿದರು. 
ಕ್ಷೇತ್ರ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ಬಂಟ್ವಾಳ ಕ್ಷೇತ್ರದ ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮತ್ತು ಪ್ರ.ಕಾರ್ಯದರ್ಶಿಗಳು , ಕ್ಷೇತ್ರದ ಪದಾಧಿಕರಿಗಳು, ಮೊರ್ಚಾದ ಪದಾಧಿಕಾರಿಗಳು ಗ್ರಾ.ಪಂ ಸಮಿತಿಯ ಪದಾಧಿಕಾರಿಗಳು, ಹಾಗೂ ಶಕ್ತಿಕೇಂದ್ರದ ಪ್ರಭಾರಿಗಳು ಮತ್ತು ಗ್ರಾ.ಪಂಚಾಯತ್ ಮತ್ತು ಪುರಸಭೆಯ ಜನಪ್ರತಿ ನಿಧಿಗಳು ಉಪಸ್ಥಿತರಿದ್ದರು.
