ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ-ಮುನ್ನೂರು ಇದರ ವಾರ್ಷಿಕ ದೊಂಪದಬಲಿ ನೇಮೋತ್ಸವದ ಪೂರ್ವಭಾವಿ ಸಭೆಯು ತಾ.16-12-2018 ರಂದು ಶ್ರೀ ಮಂಜುನಾಥ ರೈ ಯಾನೆ ಕೋಟಿ ಮಾರ್ತರು ಪರಾರಿಗುತ್ತು ಇವರ ಮುಂದಾಳತ್ವದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿಯವರ ಅಧ್ಯಕ್ಷತೆಯಲ್ಲಿ ದೈವಸ್ಥಾನದ ವಠಾರದಲ್ಲಿ ಜರಗಿತು.

ಸಭೆಯಲ್ಲಿ ವಾರ್ಷಿಕ ದೊಂಪದಬಲಿ ನೇಮೋತ್ಸವದ ಪ್ರಯುಕ್ತ ದಿನಾಂಕ 20-01-2019 ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಕೋಳಿ ಕುಂಟ, 23-01-2019ರ ಸಂಜೆ ಗಂಟೆ 6.00ಕ್ಕೆ ಚಪ್ಪರ ಏರುವುದು , 24-01-2019ರಂದು ರಾತ್ರಿ 8.00ಕ್ಕೆ ಭಂಡಾರ ಬಂದು ನೇಮೋತ್ಸವವನ್ನು ವಿಜೃ ಂಭಣೆಯಿಂದ ನಡೆಸುವುದಾಗಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾಗಣೆ ತಂತ್ರಿಗಳಾದ ಸೂರ್ಯನಾರಾಯಣ ಭಟ್, ಪರಾರಿಗುತ್ತು ದಯಾನಂದ ಶೆಟ್ಟಿ, ಪರಾರಿಗುತ್ತು ಪ್ರವೀಣ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಆಚಾರ್ಯ, ಹರಿಪ್ರಸಾದ್ ಭಂಡಾರಿ ಆಳ್ವರಪಾಲು, ಧನಂಜಯ ಶೆಟ್ಟಿ ಪರಾರಿಗುತ್ತು, ಸಚ್ಚಿದಾನಂದ ಖಂಡೇರಿ ಕಾಟುಕುಕ್ಕೆ, ಧೀರಜ್ ಶೆಟ್ಟಿ ಪರಾರಿಗುತ್ತು, ದೀಕ್ಷಿತ್ ಶೆಟ್ಟಿ, ಎನ್.ಬಿ.ಬಾಲಕೃಷ್ಣ, ಸಂಪತ್ ಕುಮಾರ್ ರೈ, ಲಕ್ಷ್ಮಣ ಸಪಲಿಗ, ವಿನೋದ್ ನಾಯಕ್, ರಾಕೇ ಶ್ ಬಳ್ಳಾಲ್, ಕೇಶವ, ನರೇಂದ್ರ ಆಳ್ವ, ಗಂಗಾಧರ ಗಟ್ಟಿ, ಮಮತಾ ಶೆಟ್ಟಿ, ಚಿತ್ರಾವತಿ ಎಸ್.ರೈ, ಭೋಜ ಬಂಗೇರಾ, ದಿವಾಕರ ಶೆಟ್ಟಿ ಹೊಸಮನೆ, ಸತೀಶ್ ಗಟ್ಟಿ ಮುಂತಾದವರು ಭಾಗವಹಿಸಿದ್ದರು. ಮನೋಜ್ ಆಳ್ವ ಸ್ವಾಗತಿಸಿದರು. ಚಂದ್ರಶೇಖರ ಗಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *