ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ( ರಿ.) ಬಂಟ್ವಾಳ ತಾಲೂಕು ಇದರ 2017-18 ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನಿವ್ರತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಂಟ್ವಾಳ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಅವರ ಅಧ್ಯಕ್ಷೆ ತೆಯಲಿ ಶನಿವಾರ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ಸರಕಾರಿ ನೌಕರರು ಉತ್ತಮವಾಗಿ ಸಕ್ರೀಯವಾಗಿ ಕೆಲಸ ಮಾಡಿದಾಗ ಸರಕಾರದಿಂದ ಮತ್ತು ಸಾರ್ವಜನಿಕ ವಲಯದಿಂದ ಉತ್ತಮ ಅಭಿಪ್ರಾಯವನ್ನು ಪಡೆಯಲು ಸಾಧ್ಯ ವಾಗುತ್ತದೆ. ಸಾರ್ವಜನಿಕ ರೊಂದಿಗೆ ಉತ್ತಮ ಬಾಂಧ್ಯವ್ಯ, ಸಹನೆಯ ವ್ಯವಹಾರ ಬಹಳ ಮುಖ್ಯ ವಾಗಿದೆ .
ಸರಕಾರಿ ನೌಕರರ ಒತ್ತಡ ದ ಕೆಲಸದ ಪರಿಣಾಮ ಆರೋಗ್ಯ ದಲ್ಲಿ ಏರುಪೇರುಗಳು ಬರುತ್ತವೆ. ಇಂತಹ ಬೇರೆ ಬೇರೆ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಾಗ ಇದರಿಂದ ಹೊರಬರಲು ಸಾಧ್ಯ. ಸ್ಥಿತಿಗತಿಗಳ ಆಧ್ಯಯನಕ್ಕೆ ರಾಜ್ಯದ ಲ್ಲಿ ಸಂಶೋಧನಾ ಘಟಕ ಸ್ಥಾಪನೆ ಮಾಡಲು ಅಭಿಪ್ರಾಯ ವ್ಯಕ್ತಪಡಿಸಿದರು. ಸರಕಾರದ ಮುಂದೆ ಸರಿಯಾದ ಅಂಕಿ ಅಂಶಗಳ ಜೊತೆ ಸಮಸ್ಯೆ ಗಳನ್ನು ನೀಡುವ ಪ್ರಯತ್ನ ಮಾಡಿ. ಕಾನೂನು ಸಮಸ್ಯೆ ಎದುರಿಸುವ ನೌಕರರಿಗೆ ಉಚಿತ ಕಾನೂನಿನ ಸೇವೆಗಾಗಿ ಕಾನೂನು ಸೇವಾ ಘಟಕದ ಅವಶ್ಯ ಕತೆ ಕೂಡಾ ಬಹಳ ಮುಖ್ಯವಾಗಿದೆ ಎಂದರು. ಸಕಾಲದಲ್ಲಿ ಎಲ್ಲಾ ಇಲಾಖೆ ಗಳ ನೌಕರರಿಗೆ ವೇತನ ಪಾವತಿ ಯಾಗುವಂತೆ ಸರಕಾರಕ್ಕೆ ಒತ್ತಾಯಿಸಬೇಕು ಎಂದರು.
ಕಾರ್ಯಕ್ರಮ ದಲ್ಲಿ ಸಂಘದ ಜಿಲ್ಲಾ ಧ್ಯಕ್ಷ ಪ್ರಕಾಶ್ ನಾಯಕ್, ನಿವ್ರತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್, ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಮನ್ವಯಾಧಿಕಾರಿ ರಾಧಾಕ್ರಷ್ಣ ಭಟ್, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಸ್ಟಾನಿ ಲೋಬೋ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಜಯರಾಮ್, ಪ್ರಶಸ್ತಿ ವಿಜೇತ ಶಿಕ್ಷಕಿ ಶಾರದಾ ಎಸ್ ರಾವ್ , ನಿವ್ರತ್ತ ಶಿಕ್ಷಕ ಸಂಘದ ಗೌರವ ಸಲಹೆಗಾರ ರಮೇಶ್ ನಾಯಕ್ ರಾಯಿ,
ಟಿ.ಜಿ.ಟಿ.ಸಂಘಧ ಆಧ್ಯಕ್ಷೆ ಶ್ರೀಮತಿ, ಸಂಘದ ಖಜಾಂಚಿ ಜೆ.ಜನಾರ್ದನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕಾರ್ಯ ದರ್ಶಿ ಮಹೇಶ್,ಪ್ರಾಥಮಿಕ ಪದವಿಧರ ಸಂಘದ ಅಧ್ಯಕ್ಷ ರಾಜೇಶ್ , ಡಿ.ದರ್ಜೆ ನೌಕರರ ಸಂಘಧ ಆಧ್ಯಕ್ಷ ಕೇಶವ , ಯುವಜನ ಸಬಲೀಕರಣ ಕ್ರೀಡಾಧಿಕಾರಿ
ನವೀನ್ ಪಿ.ಎಸ್, ಎನ್.ಪಿ.ಎಸ್.ಸಂಘದ ಅಧ್ಯಕ್ಷ ಸಂತೋಷ್, ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯ ರು
ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ಸ್ವಾಗತಿಸಿದರು.
ಜೆ.ಜನಾರ್ದನ ವಂದಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಯರಾಮ ಕಾರ್ಯಕ್ರಮ ನಿರೂಪಿಸಿದರು
