ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ, ಮಂಗಳೂರು ಹಾಗೂ ಸವಿತಾ ಸೌಹಾರ್ದ ಸಹಕಾರಿ ನಿಯಮಿತ, ಬಿ.ಸಿ.ರೋಡ್, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸವಿತಾ ಸಮಾಜ ಸಂಘಟನೆಗಳ ಸಂಘಟಕರಲ್ಲಿ ಒಬ್ಬರಾದ ದಿ.ವಿಠಲ ಭಂಡಾರಿ ಸಂಸ್ಮರಣಾ ಕಾರ್ಯಕ್ರಮ ಮಂಗಳವಾರ ಮಂಗಳಾದೇವಿ ಶ್ರೀ ದೇವಿ ನಿಲಯದಲ್ಲಿ ನಡೆಯಿತು.Savitha

ದ.ಕ.ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಮಾರ್ಟ್ ಕಾರ್ಡ್ ಬಗ್ಗೆ ಮಾಹಿತಿಯನ್ನು ಮಂಗಳೂರಿನ ಕಾರ್ಮಿಕ ಇಲಾಖೆ ಸೀನಿಯರ್ ಲೇಬರ್ ನಿರೀಕ್ಷಕ ಮೇರಿ ಫ್ರೆಡ್ರಿಕ್ ಡಯಾಸ್ ನೀಡಿದರು.

ಸವಿತಾ ಸೌಹಾರ್ದ ಸಹಕಾರಿ ಬಿ.ಸಿ.ರೋಡ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಉಪಾಧ್ಯಕ್ಷರ ಸುರೇಶ್ ನಂದೊಟ್ಟು, ದ.ಕ.ಜಿಲ್ಲಾ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ದಿನೇಶ್ ಎಲ್.ಬಂಗೇರ ಹೊಸಬೆಟ್ಟು, ಭವಾನಿ ವಿಠಲ ಭಂಡಾರಿ ಕುಳಾಯಿ ಉಪಸ್ಥಿತರಿದ್ದರು. ಜಿಲ್ಲಾ ಪ್ರತಿನಿಧಿ ವಸಂತ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *