ಮಾಣಿ :ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಮಗುವಿನ ಆಸಕ್ತಿಗನುಗುಣವಾಗಿ ಅವರಿಗೆ ಶಿಕ್ಷಣವನ್ನು ನೀಡಿ, ಮಕ್ಕಳನ್ನು ಪ್ರೀತಿಸಿದರೆ ಭಗವಂತ ನಮ್ಮನ್ನು ಪ್ರೀತಿಸಿ ಆರ್ಶಿವದಿಸುವನು ಎಂದು ಸುದಾನ ವಸತಿಶಾಲೆಯ ಸಂಚಾಲಕ ರೆ. ವಿಜಯ್ ಹರ್ವಿನ್‍ರವರು ಹೇಳಿದರು. ಅವರು ಗುರುವಾರ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು .3M4A4439

 

3M4A4747ಮುಖ್ಯ ಅಥಿತಿಯಾಗಿ ಶಾಲೆಯ ಹಳೇ ವಿದ್ಯಾರ್ಥಿ ಶ್ರೀ ಮನೋಜ್ ಕುಮಾರ್ ರೈಯವರು ಮಾತನಾಡಿ ಶಿಕ್ಷಣದಿಂದ ಜ್ಞಾನ ವ್ಡದ್ದಿಯಾಗಬೇಕು , ಮಗುವು ವಿದ್ಯಾಭ್ಯಾಸ ಮುಗಿಸಿದಾಗ ಎಲ್ಲಾ ಮೌಲ್ಯಗಳು ವ್ಡದ್ದಿಯಾಗಬೇಕು ಅದುವೇ ಸಮಗ್ರ ಶಿಕ್ಷಣ ಎಂದರು. ಮತ್ತೋರ್ವ ಅತಿಥಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ಇವರು ಮಾತನಾಡುತ್ತಾ ಶಿಕ್ಷಣದ ಗುಣ ಮಟ್ಟ ಚೆನ್ನಾಗಿದ್ದರೆ ಮಕ್ಕಳ ಕಲಿಕೆ ಚೆನ್ನಾಗಿರುತ್ತದೆ ಎಂದರು .3M4A4426

ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಬಿ.ಎಸ್ ನಾೈಕ್, ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ, ಟ್ರಸ್ಟಿ ಜಯಲಕ್ಷ್ಮಿ ಎನ್, ಉಪಾಧ್ಯಕ್ಷ ಅಪ್ರಾಯ ಪೈ , ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಉಪಾಧ್ಯಕ್ಷೆ ಲಕ್ಷ್ಮೀ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ, ವಿದ್ಯಾರ್ಥಿ ನಾಯಕ ವಿಜೇತ್ ಕೆ.ಎಂ ಮತ್ತಿತರು ಉಪಸ್ಥಿತರಿದ್ದರು. ಸಂಚಾಲಕ ಜೆ.ಪ್ರಹ್ಲಾದ್.ಶೆಟ್ಟಿ ಸ್ವಾಗತಿಸಿ, ಆಡಳಿತಾಧಿಕಾರಿ ಸಿ.ಶ್ರೀಧರ್ ಪ್ರಸ್ತಾವನೆಗೈದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ ವಂದಿಸಿದರು. ಸಹ ಶಿಕ್ಷಕಿಯರಾದ ಸುಧಾ ಎನ್.ರಾವ್ , ರಶ್ಮೀ ಫೆರ್ನಾಂಡೀಸ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *