ವಿಟ್ಲ :ವಿಟ್ಲದ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ವಿಟ್ಲ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಕೆ ರಾಮಚಂದ್ರ ರವರು ದೀಪ ಬೆಳಗಿಸಿ ಕ್ರೀಡಾ ಜ್ಯೋತಿಯನ್ನು ರಾಜ್ಯ ಮಟ್ಟದ ಕ್ರೀಡಾಪಟು ಕೀರ್ತಿ ಕೆ ಇವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು.
ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಶ್ರೀಧರ ಕೊಡಕ್ಕಲ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಮೋನಪ್ಪ ಶೆಟ್ಟಿ, ಪ್ರಾಂಸುಪಾಲ ಜಯರಾಮ ರೈ, ಉಪಪ್ರಾಂಶುಪಾಲೆ ಶಾಲಿನಿ ನೋಂಡ, ನಿವೃತ್ತ ಸೈನಿಕ ಶ್ರೀಪ್ರಕಾಶ್ ಮತ್ತು ಇಂಜೀನೀಯರ್ ರಾಘವೇಂದ್ರ ಪೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಖವಾಯತ್ ನಡೆಯಿತು. ಸಹ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ಸಂಯೋಜಿಸಿದರು.

