ಬಂಟ್ವಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ-ಮಂಗಳೂರು, ಶಾಖಾ ಗ್ರಂಥಾಲಯ ಬಂಟ್ವಾಳ ಇದರ ಅಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-೨೦೧೮ ಇದರ ಅಂಗವಾಗಿ “ಪುಸ್ತಕ ಪ್ರದರ್ಶನ ಹಾಗೂ ಗ್ರಂಥಾಲಯ ಸದಸ್ಯತ್ವ ಆಂದೋಲನ”ಕ್ಕೆ ರವಿವಾರ ಬಿ.ಸಿ.ರೋಡ್ ತಾಲೂಕು ಪಂಚಾಯತ್ ಎಸ್ ಜಿ ಎಸ್ ವೈ  ತರಬೇತಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಹಾಗೂ ಆರೋಗ್ಯಕರ ಚಿಂತನೆಗಳನ್ನು ನೀಡಬೇಕಾಗಿದೆ ಎಂದರು.1 (3)
ಪುಸ್ತಕ ಪ್ರದರ್ಶನವನ್ನುಅಬ್ಬಾಸ್ ಅಲಿ ಉದ್ಘಾಟಿಸಿದರು.  ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ,  ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ತಾಪಂ ಸ್ಥಾಯಿ‌ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಉಪಸ್ಥಿತರಿದ್ದರು.ಇದೇ ವೇಳೆ ಸಾಹಿತಿ ಡಾ‌.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರನ್ನು ಸನ್ಮಾನಿಸಲಾಯಿತು.2
3 (1)ಜಯಲಕ್ಷ್ಮಿ ಹಾಗೂ ಬಳಗ ನಾಡಗೀತೆ ಹಾಡಿದರು. ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಮಮತಾ ರೈ ಅವರು ಪ್ರಸ್ತಾವಿಕವಾಗಿ ಮಾತನಾಡಿ,  ಸ್ವಾಗತಿಸಿದರು. ಶಾಖಾ ಗ್ರಂಥಾಲಯ ಸಹಾಯಕ ಗ್ರಂಥಾಪಾಲಕಿ ನಮಿತಾ ಬಿ. ನಿರೂಪಿಸಿದರು. ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಮಾನಸಾ, ಜಯಲಕ್ಷ್ಮೀ, ವಿಮಲಾ, ಜಯಲಕ್ಷ್ಮೀ, ಗುಣವತಿ, ಜಯಂತಿ, ಉಮಾವತಿ ಅವರನ್ನು ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *