ಬೆಂಗಳೂರು: ಲಿವನ್ ಟೈಮ್ಸ್ ಫ್ರೆಶ್ ಫೇಸ್ ಬೆಂಗಳೂರಿನ ಯುವ ಪ್ರತಿಭೆಗಳಿಗೆ ಅವರ ವ್ಯಕ್ತಿತ್ವ ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಯಿತು.
ಬೆಂಗಳೂರಿನ 20 ಕಾಲೇಜು ಹಾಗೂ 1 ಓಪನ್ ಮಾಲ್ ನಲ್ಲಿ ನಡೆಸಿದ ಈ ಪ್ರತಿಭಾನ್ವಷಣೆಯ ಆಡಿಷನ್ ನಲ್ಲಿ ಕಠಿಣ ಆಯ್ಕೆಯ ಮೂಲಕ 150 ಸೆಮಿಫೈನಲಿಸ್ಟ್ ಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಟಾಪ್ 20 ಅನ್ನು ಸಿಟಿ ಫಿನಾಲೆಗಾಗಿ ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ದಿವಾಸ್ ಕೌಶಿಕ್ ಹಾಗೂ ಸುಕಾನ್ಯ ಗಿರೀಶ್ ವಿಜೇತರಾದರು.
ಲೈಂಗಿಕ ದುರ್ಬಳಕೆ ಹಾಗೂ ದಾಳಿಗೆ ಸಂಬಂಧಪಟ್ಟಂತೆ ದಿವಾಸ್ ಕೌಶಿಕ್ ಅವರ ಅದ್ಭುತವಾದ ರ್ಯಾಂಪ್ ಅಭಿನಯ ತೀರ್ಪುಗಾರರ ಮನಸೆಳೆಯಿತು. ಹಾಗೇ ಸುಕನ್ಯಾ ಗಿರೀಶ್ ಅವರು ತಮ್ಮ ಪ್ರತಿಭೆಯಿಂದ ತೀರ್ಪುಗಾರರು ಹಾಗೂ ಪ್ರೇಕ್ಷಕರ ಗಮನ ಸೆಳೆದರು. ಸ್ಪರ್ಧಿಗಳ ಪ್ರತಿಭೆ ಹಾಗೂ ಅವರು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಂಡರು ಹಾಗೇ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅಭಿಪ್ರಾಯ ಎಂಬಿತ್ಯಾದಿ ವಿಷಯಗಳ ಆಧಾರದ ಮೇಲೆ ತೀರ್ಪುಗಾರರು ಅವರನ್ನು ಆಯ್ಕೆ ಮಾಡಿದರು.
ಈ ಆಡಿಷನ್ನಲ್ಲಿ ನಟಿ ಶೃತಿ ಹರಿಹರನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶೃತಿ ಹರಿಹರನ್ ‘ಬೆಂಗಳೂರು ಫ್ರೆಶ್ ಫೇಸ್ ಫಿನಾಲೆಯ 11ನೇ ಆವೃತ್ತಿಯಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದರಲ್ಲಿ ಭಾಗವಹಿಸಿದ ಆ ಮಕ್ಕಳು ಹಾಗೂ ಯುವಕರು ಪ್ರತಿಭಾವಂತರು. ಇವರ ಕೈಯಲ್ಲಿ ನಮ್ಮ ದೇಶದ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗೇ ಇದರಲ್ಲಿ ಭಾಗವಹಿಸಿದವರಿಗೂ ಹಾಗೂ ವಿಜೇತರಿಗೂ ನನ್ನ ಅಭಿನಂದನೆಗಳು. ಈ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಕಲಿಯಲು ಇದೊಂದು ಅವರಿಗೆ ಉತ್ತಮವಾದ ಅವಕಾಶ. ನಾನು ಎಲ್ಲರಿಗೂ ಶುಭ ಹಾರೈಕೆಗಳು ಎಂದು ಹೇಳಿದರು.
ಸ್ಪರ್ಧಿಗಳನ್ನು ಅವರ ವ್ಯಕ್ತಿತ್ವ, ಪ್ರತಿಭೆ, ಜ್ಞಾನ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅರಿವುಗಳ ಆಧಾರದ ಮೇಲೆ ನಿರ್ಣಯ ಮಾಡಲಾಯಿತು. ಆಯ್ಕೆಯಾದ ಪ್ರತಿ ನಗರದ ಫೈನಲಿಸ್ಟ್ ಗಳು ಮುಂಬೈಯಲ್ಲಿ ನಡೆಯಲಿರುವ ನ್ಯಾಷನಲ್ ಗ್ರಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ವಿಜೇತರಾದ ಒಬ್ಬ ಹುಡುಗ ಹಾಗೂ ಒಬ್ಬ ಹುಡುಗಿ ಲಿವನ್ ಟೈಮ್ಸ್ ಫ್ರೆಶ್ ಫೇಸ್ನ11ನೇ ಆವೃತ್ತಿಯ ಕಿರೀಟವನ್ನು ತಮ್ಮು ಮುಡಿಗೇರಿಸಿಕೊಳ್ಳಲಿದ್ದಾರೆ.
ಈ ಆಡಿಷನ್ ಅವಕಾಶವನ್ನು ಮಾಡಿಕೊಂಡಿದ್ದಾರೋ ಅವರು ನೇರವಾಗಿ ಮುಂಬೈನಲ್ಲಿ ನಡೆಯಲಿರುವ ಲಿವನ್ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 11ರ ರಾಷ್ಟ್ರೀಯ ಫಿನಾಲೆಗೆ ಹೋಗಬಹುದು.
ಲಿವನ್ ಮಿಸ್ ಫ್ಯಾಬ್ ಹಾಗೂ ಸೆಟ್ ವೆಟ್ ಪ್ರಾಯೋಜಕತ್ವದ ವೈಲ್ಡ್ ಕಾರ್ಡ್ ಪ್ರವೇಶದಿಂದ ನ್ಯಾಷನಲ್ ವಿನ್ನರ್ ಆಗುವ ಅವಕಾಶವನ್ನು ನೀಡಲಿದೆ. www.timesfreshface/wildcard ನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು.
ಟೈಮ್ಸ್ ಫ್ರೆಶ್ ಫೇಸ್ ವಿಶ್ವದಾದ್ಯಂತ ಇರುವ ಪ್ರತಿಭೆಗಳನ್ನು ಒಟ್ಟಿಗೆ ತಂದು ಅವರ ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.




