ಬಂಟ್ವಾಳ: ಸರ್ದಾರ್ ವಲ್ಲಾಭಾಯ್ ಪಟೇಲರು ಬಡತನದಲ್ಲಿ ಹುಟ್ಟಿ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು, ವಕೀಲ ವೃತ್ತಿಯನ್ನು ಆರಂಭಿಸಿದರು. ದೇಶ ಸೇವಾ ಮನೋಭಾವದಿಂದ ಅವರು ಸ್ವಾತಂತ್ಯ್ರ ಚಳುವಳಿಯಲ್ಲಿ ಭಾಗವಹಿಸಿ ದೇಶದ ಮೊದಲ ಉಪಪ್ರಧಾನಿಯಾದರು. ಅವರಿಂದಾಗಿ ಹರಿದು ಹಂಚಿಹೋಗುತ್ತಿದ್ದ ಭಾರತವು ಏಕೀಕೃತಗೊಂಡು ಆಧುನಿಕ ಭಾರತದ ಬಿಸ್ಮಾರ್ಕ ಎಂದು ಪೊಳಲಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಯಶವಂತ್,ಬಂಟ್ವಾಳ ಹೇಳಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ , ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು ಸರ್ಕಾರಿ ಫ್ರೌಢಶಾಲೆ ಪೊಳಲಿ, ಗ್ರಾಮ ಪಂಚಾಯತ್ ಕರಿಯಂಗಳ, ತಾಲ್ಲೂಕು ಪಂಚಾಯತ್ ಬಂಟ್ಟಾಳ ಇವರ ಸಹಯೋಗದಲ್ಲಿ ಅ.31ರಂದು ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ವಿಶೇóಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ವಾರ್ತಾ ಸೇವೆ ಕೆ.ಪಿ.ರಾಜೀವನ್ ಮಾತನಾಡಿ, ಉಪನಿರ್ದೇಶಕರು ಇವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರಂಜಿತ್ ರಾಜೀವ್‍ರವರು ವಲ್ಲಭಾಯಿ ಪಟೇಲರ ಜೀವನ ಚರಿತ್ರೆಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು. ಜಾನೇಟ್ ಲೋಬೋರವರು ಪಟೇಲರು ದೇಶದ ಸಂಸ್ಥಾನಗಳ ಏಕೀಕರಣದಲ್ಲಿ ಅವರ ಪಾತ್ರದನ್ನು ವಿವರಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಶೇಶರ್ ರಾವ್ ಮಾತನಾಡಿ, ದೇಶದ ಏಕತೆಗೆ ತೊಡಕಾಗಿರುವ ಅಂಶಗಳು ಮತ್ತು ಅದರ ನಿವಾರಣೆಯ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಏಕತೆಗೆ ಸಂಬಂಧಿಸಿದಂತೆ ಫ್ರೌಢಶಾಲೆ ಮಕ್ಕಳಿಂದ ಪ್ರತಿಜ್ಷಾನ ವಿಧಿ ಸ್ವೀಕರಿಸಲಾಯಿತು.
ರೋಹಿತ್.ಜಿ.ಎಸ್. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಇವರು ಸ್ವಾಗತಿಸಿದರು. ಉಮಾ ವಂದಿಸಿದರು. ಪೂರ್ಣಿಮಾ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ “ರಾಷ್ಟ್ರೀಯ ಏಕತಾ ಕುರಿತು” ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಚಿತ್ರ ಪದರ್ಶನ ನಡೆಸಲಾಯಿತು.
ರಾಷ್ಟ್ರೀಯ ಏಕತಾ ಕುರಿತು ಕುರಿತು ವಿದ್ಯಾರ್ಥಿಗಳಿಗೆ ಹಲವಾರು ಸ್ಛರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
