ಉಡುಪಿ : ಜಯ೦ಟ್ಸ್ ಬ್ರಹಾವರ ಇದರ ವತಿಯಿ೦ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅ.26 ರಂದು ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ಖ್ಯಾತ ವೈದ್ಯರಾದ ಡಾII ಅಶೋಕ್ ಕುಮಾರ್ ವೈ.ಜಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಆರೋಗ್ಯ ಜ್ಞಾನ ಅಗತ್ಯವಾಗಿ ನೀಡಬೇಕು. ಅವರಿಗೆ ಉತ್ತಮ ಆಹಾರದ ಜೊತೆಗೆ ಅನಾರೋಗ್ಯದ ಕುರಿತು ಗಮನ ನೀಡಬೇಕಾಗಿದೆ ಎಂದು ಸೂಚಿಸಿದರು.

udupi-health camp
ಜಯ೦ಟ್ಸ್ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಜಯ ವಿಜಯ, ವಿಲ್ಸ್ ನ್, ಅಮೃತ ಲ್ಯಾಬ್ ರಾಘವೇಂದ್ರ ಕಿಣಿ, ಜಯ oಟ್ಸ್ ಫೆಡರೇಶನ್ 6ರ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ರವಿರಾಜ್ ಹೆಚ್.ಪಿ, ಸು೦ದರ್ ಪೂಜಾರಿ, ಸುಬ್ರಮಣ್ಯ ಮುಔತಾದವರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಕವಾ೯ ಲು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *