ಮೂಡುಬಿದಿರೆ : ಕಡಂದಲೆ ನಲ್ಲೆಗುತ್ತು ಸಮೀಪದ ಶಾಂಭವಿ ನದಿಯಲ್ಲಿ ವೃದ್ಧರೊಬ್ಬರ ಶವವು ಪೊದೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.
ಸಚ್ಚರಿಪೇಟೆ ಕೊರಗರ ಕಾಲನಿ ನಿವಾಸಿ ತನಿಯ (70ವ) ಎಂಬವರ ಶವವು ಪತ್ತೆಯಾಗಿದ್ದು, ಮೃತಪಟ್ಟು 8 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಯ ಅವರ ಕುಟುಂಬವು ತೀರ ಬಡತನದಲ್ಲಿದ್ದರಿಂದ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷ ದೇಜಪ್ಪ ಅವರು ಸಾಂತ್ವಾನ ಹೇಳಿ ಶವ ಸಂಸ್ಕಾರಕ್ಕೆ ಆರ್ಥಿಕ ನೆರವನ್ನು ನೀಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
