ಪೊಳಲಿ:ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಮೋ ಸೇವಾ ಬ್ರಿಗೇಡ್ ಬಡಗಬೆಳ್ಳೂರು ಘಟಕ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಹಕಾರದಲ್ಲಿ ಬಡಗಬೆಳ್ಳೂರು ಗ್ರಾಮದ ಜಂಕ್ಷನಿನಲ್ಲಿ ಸೀಸಿಟಿವಿ ಕ್ಯಾಮರಾ ಅಳವಡಿಸಲಾಯಿತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಪ್ರಸನ್ನ ಎಂ ಎಸ್ ಸೀಸಿಟೀವಿ ಕ್ಯಾಮರಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಮುಖಂಡ ದೇವಪ್ಪ ಪೂಜಾರಿ, “ಇದೊಂದು ಸಾಮಾಜಿಕ ಕಳಕಳಿಯ ಕೆಲಸವಾಗಿದ್ದು, ಈ ಮೂಲಕ ಅಪರಾಧ ತಡೆಗಟ್ಟಲು ಸಾಧ್ಯವಿದೆ” ಎಂದರು.
ಬಡಗಬೆಳ್ಳೂರು ನಮೋ ಸೇವಾ ಬ್ರಿಗೇಡ್ ಸಂಸ್ಥಾಪಕ ಶಶಿಕಿರಣ್ ಮಾತನಾಡಿ “ಸಮರ್ಪನಾ ಭಾವದಿಂದ ಸೇವೆ ಎಂಬ ಧ್ಯೇಯದೊಂದಿಗೆ ಶಶಿಕಿರಣ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದವರ ವೈದಕೀಯ ಚಿಕಿತ್ಸೆಗೆನರವು ನೀಡುವುದು ನನ್ನ ಮೊದಲ ಆಧ್ಯತೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಬಡಗಬೆಳ್ಳೂರು ಭಾರತೀಯ ಸೇನೆಯ ಯೋಗೀಶ ಪೂಜಾರಿ, ಕೊಳತ್ತಮಜಲು ಜುಮ್ಮಾ ಮಸೀದಿಯ ಇಬ್ರಾಹಿಂ ದಾರಿಮಿ, ಬಿಜೆಪಿ ರೈತ ಸಂಘದ ಉಪಾಧ್ಯಕ್ಷ ರಮೇಶ್ ಬಟ್ಟಾಜೆ,ಬಂಟ್ವಾಳ ಗ್ರಾಮಾಂತರ ಬೀಟ್ ಪೊಲೀಸ್ ಸುಬ್ರಹ್ಮಣ್ಯ, ಬಡಗಬೆಳ್ಳೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ದನ ಕೊಟ್ಟಾರಿ, ಉದ್ಯಮಿ ಉಮೇಶ ಪೂಜಾರಿ ಪರಿಮೊಗರು ಮೊದಲಾದವರಿದ್ದರು
