ಮಲ್ಪೆ:- ಉಡುಪಿಯ ಪ್ರಸಿದ್ದ ಚರ್ಮ ರೋಗ ತಜ್ಞರಾದ ಡಾ|| ಸನತ್ ಎಸ್ ರಾವ್ ರವರ ಜಲಜ ಸ್ಕಿನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಹಳೆ ಅಂಚೆ ಕಚೇರಿ ರಸ್ತೆಯಲ್ಲಿರುವ ಸಾಯಿ ಹರ್ಷಾ ಸ್ಕ್ವೇರ್ ನಲ್ಲಿ ಅ.19 ರಂದು ನಡೆಯಿತು,
ಕಾರ್ಯಕ್ರಮವನ್ನು ಬಾರತೀಯ ಚರ್ಮ ರೋಗ ತಜ್ಞರ ಸಂಘದ ಅದ್ಯಕ್ಷರಾ ಡಾ|| ರಮೇಶ್ ಭಟ್ ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತಿ ಮೂಡಿಸಬೇಕಾಗಿದೆ ಸಮಾಜದಲ್ಲಿ ಇಂದು ಸಾಕಷ್ಟು ಜನರು ಆರೋಗ್ಯ ದ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ.ಈ ನಿಟ್ಟಿನಲ್ಲಿ ವೈದ್ಯರ ಸಹಕಾರದೊಂದಿಗೆ ಜನರ ಸಹಕಾರ ಅಗತ್ಯ,ಬೆಳೆಯುತ್ತಿರುವ ಉಡುಪಿಯಲ್ಲಿ ಉತ್ತಮ ಗುಣಮಟ್ಟದ ಈ ಸಂಸ್ಥೆಯು ಕಾರ್ಯನಿರ್ವಹಿಸಲಿ ಎಂದರು.

jalaja skin care udupi
ಮಣಿಪಾಲ ಕೆ.ಎಂ.ಸಿಯ ಚರ್ಮ ರೋಗ ವಿಭಾಗದ ಮುಖ್ಯಸ್ಥರಾ ಡಾ|| ಸತೀಶ್ ಪೈ ಕ್ಲಿನಿಕ್ ಉತ್ತಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಕ್ಲಿನಿಕ ಮುಖ್ಯಸ್ಥ ಡಾ|| ಸನತ್ ರಾವ್ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಉಡುಪಿ ಅದ್ಯಕ್ಷ ಡಾ||ಗುರುಮೂರ್ತಿ ಭಟ್,ಹಿರಿಯ ವೈದ್ಯರಾದ ಡಾ|| ವಿಠಲ್ ರಾವ್,ಡಾ||ರಾಜೇಶ್ ರಾವ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ||ಮಮತಾ ಎಸ್.ರಾವ್ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ವೈದ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *