ಮಂಗಳೂರು: ಕಾಲು ನೋವಿನಿಂದ ಮತ್ತೇ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾದರ್ ಅವರ ಬಲಗಾಲಿನಲ್ಲಿ ತೀವ್ರ ನೋವು ಕಾಣಿಸಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

u.t khader
ಈ ಕಾಲು ನೋವು ಕಳೆದ ತಿಂಗಳು ಕಾಣಿಸಿಕೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆ ತೆರಳಿ ಒಂದು ವಾರ ದಾಖಲಾಗಿದ್ದರು. ಆದರೆ ಅದೇ ಕಾಲು ನೋವು ಮತ್ತೇ ಹೆಚ್ಚಾಗಿದ್ದು, ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಸಲಹೆಯಂತೆ ಎಂಆರ್‍ಐ ಪರೀಕ್ಷೆಯ ಬಳಿಕ ಶಸû್ರಚಿಕಿತ್ಸೆ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಶಸû್ರಚಿಕಿತ್ಸೆಗೆ ಒಳಗಾದರೆ ಹಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ. ಅದಕ್ಕಾಗಿ ಖಾದರ್ ಕೇವಲ ಕಾಲು ನೋವಿಗಾಗಿ ಮಾತ್ರ ಚಿಕಿತ್ಸೆ ಪಡೆದುಕೊಮಡು ತಮ್ಮ ಕೆಲಸ ಕಾರ್ಯಗಳಿಂದ ಸ್ವಲ್ಪವಿಶ್ರಾಂತಿ ಪಡೆದು ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಚಿದು ಹೇಳಲಾಗುತ್ತದೆ.

By Suddi9

Leave a Reply

Your email address will not be published. Required fields are marked *