ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೈನಿಕ ದಳದ ವಾರ್ಷಿಕ ಶಿಬಿರದಲ್ಲಿ ಮಂಗಳವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.
18 ಕರ್ನಾಟಕ ಬಟಾಲಿಯನ್ನಿನ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯನ್ ಸಿಕ್ವೇರ ಅವರು, ಗಾಂಧೀಜಿಯವರು ನಮ್ಮ ದೇಶದ ಕುರಿತು ಮಹಾನ್ ಕನಸು ಕಟ್ಟಿದ್ದರು ಅವರ ಆ ಕನಸನ್ನು ನನಸಾಗಿಸುವ ಕರ್ತವ್ಯ ನಮ್ಮದು. ಕೇವಲ ನಾಮಮಾತ್ರಕ್ಕೆ ಸಲ್ಲದೆ ತುಂಬು ಹೃದಯದಿಂದ ನಾವೆಲ್ಲರೂ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು, ದೇಶಕ್ಕೆ ಒಳಿತು ಮಾಡಬೇಕು. ಸ್ವಚ್ಛತೆ ಕೇವಲ ಬಾಹ್ಯದಲ್ಲಿ ಅಲ್ಲ, ಮನದಲ್ಲಿ ಕೂಡ ಮೂಡಬೇಕು ಎಂದು ಹೇಳಿದರು.

ಆಳ್ವಾಸ್ ಕಾಲೇಜಿನ ಆವರಣದಿಂದ ಪುತ್ತಿಗೆಯವರೆಗೆ ನಡೆದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು ಮುನ್ನೂರು ಕೆಡೆಟ್ಸ್, ಆಳ್ವಾಸ್ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಡಾ. ಬಿ. ರಾಜೇಶ್, ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಅಶೋಕ್, ಲೆಫ್ಟಿನೆಂಟ್ ಪ್ರವೀಣ, ಪಿ.ಐ. ಸ್ಟಾಫ್ ಹವಲ್ದಾರ್ ಸಾಜೇಶ್, ಹವಲ್ದಾರ್ ಅರುಣ್ ರಾಜ್, ಬಿ.ಎಚ್.ಎಂ. ಚಂದನ್ ಗುರುಂಗ್, ಸುಬೇದಾರ್ ಪ್ರದ್ಯುಮನ್ ಭಾಗವಹಿಸಿದ್ದರು.
