ಕುವೈಟ್: ಬಿಲ್ಲವ ಸಂಘ ಕುವೈಟ್ನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಬಿಲ್ಲವ ಚಾವಡಿ 2018ರ ಸಮಾರಂಭವು ಸೆ.14 ಶುಕ್ರವಾರದಂದು ಕುವೈಟ್ನ ಕೇಂಬ್ರಿಡ್ಜ್ ಶಾಲೆಯ ಸಭಾಂಗಣದಲ್ಲಿ ಜರಗಿತು.

ಈ ಸಮಾರಂಭಕ್ಕಾಗಿ ಊರಿಂದ ಆಗಮಿಸಿದ ತುಳು ಭಾಷೆಯ ಮಾಂತ್ರಿಕ ಮೂಡುಬಿದಿರೆಯ ನಿತೇಶ್ ಪೂಜಾರಿ ಮಾನಾರ್ಡ್ ಹಾಗೂ ಅಶ್ವಿತಾ ಸುರೇಂದ್ರರೊಂದಿಗೆ ಕಾರ್ಯಕ್ರಮವನ್ನು ಅತ್ತ್ಯುತ್ತಮವಾಗಿ ನಿರೂಪಿಸಿದರು.

ನಾರಾಯಣ ಗುರುಪೂಜೆಯಿಂದ ಪ್ರಾರಂಭವಾದ ಸಮಾರಂಭವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ, ರಾಕೇಶ್ ಶೆಟ್ಟಿ ಬಿ.ಸಿರೋಡ್ ರಚಿಸಿದ ನಟಿಸಿದ ತುಳು ಹಾಸ್ಯಮಯ ನಾಟಕ “ಕೈಕ್ತಿಕ್ಕುಜೆರ್”, ಗಣೇಶ್ ಕೊಡೆಲ್ಕೆವೆರೆ ಅವರ ಸುಮಧುರಸಂಗೀತದೊಂದಿಗೆ, ಸತೀಶ್ ಆಚಾರ್ಯರವರ ನಿರ್ದೇಶನದಲ್ಲಿ ಹಾಗು ಅತಿಥಿಕಲಾವಿದರಾದರಾದ ಪ್ರವೀಣ್ ಕೋಟ್ಯಾನ್ ಕೊಡಕ್ಕಲ್, ಚಂದ್ರಶೇಕರ್ ಪೂಜಾರಿ ಇವರು ಕುವೈಟ್ನ ಸಾಂಸ್ಕೃತಿಕ ಕಾರ್ಯದರ್ಶಿ ಅಮರ್ಸುವರ್ಣ ಹಾಗೂ ಅವರ ತಂಡದ ಕಲಾವಿದರೊಂದಿಗೆ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.
ತುಳುಭಾಷೆಯನಿರೂಪಣೆಹಾಗುತುಳುಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಈ ಸಮಾರಂಭವು ಸೇರಿದ ಜನರಲ್ಲಿ ತುಳು ನಾಡಭೂಮಿಯಲ್ಲಿರುವಂತೆ ಭಾವನೆಯನ್ನು ಮೂಡಿಸಿತಲ್ಲದೆ, ಕುವೈಟ್ನ ಬಿಲ್ಲವ
ಸಂಘದಸತತ3ನೇಯಶಸ್ವಿನಾಟಕಎಂಬಹೆಗ್ಗಳಿಕೆಗೆಪಾತ್ರವಾಯಿತು.

ಕುವೈಟ್ ಸಾರಥಿ ಸಂಘದ ಅಧ್ಯಕ್ಷರಾದ ಸುಗುನನ್ ಕೊಚುವೀಟಿಲ್ ಮುಖ್ಯ ಅತಿಥಿಯಾಗಿದ್ದರು.

ಈಸಂದರ್ಭದಲ್ಲಿಅದ್ಭುತವಾಗಿಕಾರ್ಯಕ್ರಮನಿರೂಪಿಸಿದ ನಿತೇಶ್ ಪೂಜಾರಿ ಮಾನಾರ್ಡ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿಅಧ್ಯಕ್ಷರಾದ ರಘುಸಿ. ಪೂಜಾರಿ, ಉಪಾಧ್ಯಕ್ಷರಾದ ಕೃಷ್ಣಸ್. ಪೂಜಾರಿ, ಸಲಹೆಗಾರರಾದ ರೋಹಿತ್ಸನಿಲ್ಹಾಗುಆಡಳಿತಮಂಡಳಿಯಸದಸ್ಯರುಉಪಸ್ಥಿತರಿದ್ದರು.


