ಮೂಡುಬಿದಿರೆ: ದ್ವಿಚಕ್ರವಾಹನವೊಂದರಲ್ಲಿ ಮೂಡುಬಿದಿರೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ, ಸವಾರ ಸಾವನ್ನಪ್ಪಿದ್ದು, ಸಹಸವಾರೆ ಗಾಯಗೊಂಡಿರುವ ಘಟನೆ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಮಾರಿಗುಡಿ ಸ್ವರಾಜ್ಯ ಮೈದಾನದ ಬಳಿಯ ಸಮಗಾರಗುಂಡಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

accident mbd
ಸಾಫ್ಟ್‍ವೇರ್ ಡೆವೆಲಪರ್ , ಅರಮನೆ ಬಾಗಿಲು ನಿವಾಸಿ ಗುರುರಾಜ್ ಭಂಡಾರ್ಕರ್(23) ಮೃತಪಟ್ಟ ಯುವಕ. ಈತ ವಿದ್ಯಾಗಿರಿಯಿಂದ ಮೂಡುಬಿದಿರೆ ಕಡೆಗೆ ಸ್ನೇಹಿತೆ ಕೀರ್ತಿ ಪ್ರಭು ಎಂಬಾಕೆಯನ್ನು ತನ್ನ ಸ್ಕೂಟರ್‍ನಲ್ಲಿ ಕರೆತರುವಾಗ ಸಮಗಾರಗುಂಡಿಯಲ್ಲಿ ಬಳಿ ದ್ವಿಚಕ್ರವಾಹನ ಸವಾರನ ನಿಯಂತ್ರಣ ತಪ್ಪಿದ್ದು, ಗಂಭೀರ ಗಾಯಗೊಂಡ ಗುರುರಾಜ್‍ನನ್ನು ಆಸ್ಪತ್ರೆಗೆ ದಾಖಲಿಸಲಾದರೂ, ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾನೆ. ಕೀರ್ತಿ ಪ್ರಭುವಿನ ಗಾಯಗೊಂಡಿದ್ದು, ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *