ಮೂಡುಬಿದಿರೆ: ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ವಿಭಾಗ ಮತ್ತು ಪಿ.ಎಮ್.ವಿ. ಡಿಸೈನ್ ಕನ್ಸಲ್ಟೆಂಟ್ಸ್ ಬೆಂಗಳೂರು ಸಂಯೋಜನೆಯಲ್ಲಿ ಎರಡು ದಿನಗಳ ‘ಇಲೆಕ್ಟ್ರಿಕಲ್ವೈರಿಂಗ್ ಮತ್ತು ಎಸ್ಟಿಮೇಶನ್’ ಕಾರ್ಯಾಗಾರ ನಡೆಯಿತು.
ಎನ್.ಆರ್.ಎ.ಎಂ. ಪಾಲಿಟೆಕ್ನಿಕ್ನ ಹಿರಿಯ ಪ್ರಾಧ್ಯಾಪಕ ಮೋಹನ್ ಕುಮಾರ್ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಕೇವಲ ಪುಸ್ತಕ ಜ್ಞಾನವಷ್ಟೇ ಸಾಲದು. ಪ್ರಾಯೋಗಿಕ ಜ್ಞಾನ ಇರಬೇಕು” ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ.ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ವಿದ್ಯುತೀಕರಣದ ಅಂದಾಜು ವೆಚ್ಚ ತಯಾರಿಸುವ ‘ಇಕೋಡಯಲ್’ ತಂತ್ರಾಂಶದ ಬಗ್ಗೆ ಪ್ರಾಧ್ಯಾಪಕ ಹರೀಶ್ ತಂತ್ರಿ ತರಬೇತಿ ನೀಡಿದರು.
ಪ್ರೊ.ಯೋಗೀಶ ರಾವ್ ಕಾರ್ಯಾಗಾರದ ಮಹತ್ವ ವಿವರಿಸಿದರು.
ಇ ಆ್ಯಂಡ್ ಇ ವಿಭಾಗದ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್ ಅತಿಥಿ ಪರಿಚಯ ಮಾಡಿದರು. ಪ್ರೊ.ಯೋಗೀಶ್ ರಾವ್ ಮತ್ತು ಪ್ರೊ.ಜಿ.ಬಿ.ಪ್ರವೀಣ್ ಕಾರ್ಯಕ್ರಮ ಸಂಯೋಜಿಸಿದರು. ಪ್ರೊ. ಕೃಪಾ ಮತ್ತು ಪ್ರೊ.ತೃಪ್ತಿ ಸ್ವಾಗತಿಸಿ, ವಂದಿಸಿದರು.
