ವಿಟ್ಲ: ಇಲ್ಲಿನ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಮೇಲೆ ಕಳೆದ ಜುಲೈ ತಿಂಗಳಲ್ಲಿ ಸುರಿದ ಬಾರೀ ಮಳೆಗೆ ಪಕ್ಕದ ಗುಡ್ಡ ಜರಿದು ಬಿದ್ದಿದೆ. ಈ ಘಟನೆಯ ನಂತರ ವಿಟ್ಲ ಪಟ್ಟಣ ಪಂಚಾಯತ್ ನವರು, ಸ್ಥಳೀಯ ಶಾಸಕರು ಶಾಲೆಗೆ ಭೇಟಿ ನೀಡಿದ್ದಾರೆ.
ಆದರೆ ಈವರೆಗೆ ಕುಸಿದು ಬಿದ್ದಂತಹ ಮಣ್ಣನ್ನು ತೆರವು ಗೊಳಿಸುವ ಯಾವ ಕೆಲಸವೂ ನಡೆದಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬಂದರೆ ನೀರು ಶಾಲಾ ಕೊಠಡಿಯೊಳಗೆ ನುಗ್ಗುವ ಸ್ಥಿತಿಯಲ್ಲಿದೆ.

