ಕೈಕಂಬ: ಭಾರತ ದೇಶದ ಹೆಮ್ಮಯ ಪ್ರದಾನಿ ನರೇಂದ್ರ ಮೋದಿಜಿಯವರ ರಾಷ್ಟ್ರವ್ಯಾಪಿ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ, ಸೆ.23 ಭಾನುವಾರದಂದು ಬೆಳಿಗ್ಗೆ 8-00 ಗಂಟೆಯಿಂದ ಹಿಂದೂ ಜಾಗಾರಣಾ ವೇದಿಕೆ ವಿಜಯಕೇಸರಿ ಘಟಕ ಕಂದಾವರ, ವಿಶ್ವ ಹಿಂದು ಪರಿಷತ್ ಬಜರಂಗದಳ ಮಾತ್ರಶಕ್ತಿ ದುರ್ಗಾವಾಹಿನಿ ಓಂಕಾರ ಶಾಖೆ ಕಂದಾವರ ಪದವು, ಇದರ ವತಿಯಿಂದ ಗುರುಪುರ ಕೈಕಂಬದ ಜಂಕ್ಷನ್ನಲ್ಲಿ ಸ್ವಚ್ಚತ ಕಾರ್ಯಕ್ರಮವು ಯಶಶ್ವಿಯಾಗಿ ನೆರವೇರಿತು.

IMG-20180923-WA0024
ಯುವಕರ ಈ ಅಭೂತಪೂರ್ವ ಸ್ವಚ್ಚತ ಕಾರ್ಯಕ್ರಮಕ್ಕೆ ವಿಶ್ವ ಹಿಂದು ಪರಿಷತ್ ಬಜರಂಗದಳ ಮಂಗಳೂರು ವಿಭಾಗ ಸಂಚಾಲಕರಾದ ಭುಜಂಗ ಕುಲಾಲ್ ಅದ್ಯಪಾಡಿ, ಶ್ರೀನಿವಾಸ್ ಎಂಟರ್ ಪ್ರೈಸಸ್ ಮಾಲಕರಾದ ಶ್ರೀಧರ್ ರಾವ್ ಕೈಕಂಬ, ಸತೀಶ್ ಶೆಟ್ಟಿ ಕಂದಾವರ ಇವರು ಚಾಲನೆ ನೀಡಿದರು.
ಸ್ವಚ್ಛತಾ ಕಾರ್ಯಕ್ರಮದ ಸಮಾರೋಪದ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಗುರುಪುರ ಪ್ರಖಂಡದ ಸಂಚಾಲಕರಾದ ಹರೀಶ್ ಮಟ್ಟಿ, ಮಾತ್ರಶಕ್ತಿ ದುರ್ಗಾವಾಹಿನಿ ಗುರುಪುರ ಪ್ರಖಂಡ ಕಾರ್ಯದರ್ಶಿ ಸುಜಾತ ಎಸ್ ಭಂಡಾರಿ ಕಂದಾವರ ಪದವು, ವಿಶ್ವ ಹಿಂದು ಪರಿಷತ್ ಬಜರಂಗದಳ ಗುರುಪುರ ಪ್ರಖಂಡದ ಸತ್ಸಂಗ ಪ್ರಮುಖ್ ದಿನೇಶ್ ಕಂದಾವರ ಪದವು, ವಿ ಹಿಂ ಪ ಬಜರಂಗದಳ ಓಂಕಾರ ಘಟಕದ ಅದ್ಯಕ್ಷರಾದ ಜಯರಾಮ್ ಕೋಟ್ಯಾನ್, ಸಂಚಾಲಕರಾದ ಗಂಗಾಧರ್ ,ಹಿಂದೂ ಜಾಗರಣಾ ವೇದಿಕೆ ವಿಜಯಕೇಸರಿ ಘಟಕದ ಸಂಚಾಲಕರಾದ ನಾಗೇಶ್ ಕಂದಾವರ, ಸಹ ಸಂಚಾಲಕ್ ವಿಶ್ವ, ಕಾರ್ಯದರ್ಶಿ ಸುಜೀತ್ ಹಾಗು ವಿಶ್ವ ಹಿಂದು ಪರಿಷತ್ ಬಜರಂಗದಳ ಓಂಕಾರ ಘಟಕ ಕಂದಾವರ ಪದವು, ಹಿಂದೂ ಜಾಗರಣಾ ವೇದಿಕೆ ವಿಜಯಕೇಸರಿ ಘಟಕ ಕಂದಾವರ ಪದವಿನ ಎಲ್ಲಾ ಜವಾಬ್ದಾರಿಯುತ ಕಾರ್ಯಕರ್ತರು ಹಾಗು ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *