ಮೂಡುಬಿದಿರೆ: ಭಾರತದೇಶದ ರಕ್ಷಣೆಗಾಗಿ ಮಾಡಲಾಗುತ್ತಿರುವ ವೆಚ್ಚದಲ್ಲಿ ಶೇ. 60ಕ್ಕೂ ಅಧಿಕ ಮೊತ್ತವು ಯುದ್ದ ವಿಮಾನ, ಮಿಸೈಲ್, ಉಪಕರಣಗಳಿಗೆ ವ್ಯಯವಾಗುತ್ತಿರುವುದನ್ನು ಗಮನಿಸಿದ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಾಗರಿಕರ ಹಿತರಕ್ಷಣೆಗಾಗಿ ವ್ಯಯವಾಗಬೇಕಾಗಿದ್ದ ಸಂಪನ್ಮೂಲವು ಹೀಗೆ ವಿದೇಶೀ ಪಾಲಾಗುವುದನ್ನು ತಡೆದು ನಮ್ಮ ದೇಶದಲ್ಲೇ ಹೊಸ ಸಂಶೋಧನೆ ನಡೆಸಿ, ಉಪಕರಣ, ವಾಹನಗಳನ್ನು ನಮ್ಮಲ್ಲೇ ತಯಾರಿಸುವುದಾಗಬೇಕು ಎಂಬ ಚಿಂತನೆಯಿಂದ ರಕ್ಷಣಾ ವಿಭಾಗವನ್ನು ಸ್ವದೇಶೀ ಸಾಮಥ್ರ್ಯದಲ್ಲಿ ಕಟ್ಟಿ ಬೆಳೆಸಲು ಸಂಶೋಧನೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟರು ಎಂದು ಕೇಂದ್ರ ಸರಕಾರದ ರಕ್ಷಣಾ ಸಂಶೋಧನ ಅಭಿವೃದ್ದಿ ವಿಭಾಗದ ಪ್ರಾದೇಶಿಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಪ್ರಕಾಶ್ ರಾವ್ ಕೆ. ಹೇಳಿದರು.

Kalam Upanyasa

ಆಳ್ವಾಸ್ ಕಾಲೇಜಿನ ಹ್ಯೂಮ್ಯಾನಿಟೀಸ್ ಫೋರಂ ಆಶ್ರಯದಲ್ಲಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಕಾಮರ್ಸ್ ಸೆಮಿನಾರ್ ಹಾಲ್‍ನಲ್ಲಿ `ಕಲಾಂ ಅವರ ಜೀವನ ಧ್ಯೇಯ ಮತ್ತು ವಿಶನ್ ಇಂಡಿಯಾ 2010′ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಆರ್ಟ್ಸ್ ವಿಭಾಗದ ಡೀನ್ ಸಂಧ್ಯಾ ಕೆ. ಎಸ್. ವಹಿಸಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ,ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ರಮೇಶ್ ಬಿ.,ಸಂಯೋಜಕರಾದ ನಾಗರಾಜ್, ಜಯಶ್ರೀ, ಹ್ಯುಮಾನೀಟೀಸ್ ಫೋರಂ ಕಾರ್ಯದರ್ಶಿ ಪವಿತ್ರಾ ತೇಜ್, ಎನ್‍ಸಿಸಿ ನೇವಲ್ ವಿಂಗ್‍ನ ಕ್ಯಾಪ್ಟನ್ ಮಧು ಎಂ. ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜತೆ ಕಾರ್ಯದರ್ಶಿ ಸ್ಪಂದನ ರೈ ಸ್ವಾಗತಿಸಿದರು. ದಿಶಾ ನಿರೂಪಿಸಿದರು. ಸಮನ್ ಸೈಯ್ಯದ್ ವಂದಿಸಿದರು. ಕಲಾಂ ಅವರ ಶಾಂತಿ ಗೀತೆಯನ್ನು ನುಡಿಸಲಾಯಿತು.

By suddi9

Leave a Reply

Your email address will not be published. Required fields are marked *