ಮೂಡುಬಿದಿರೆ: ಹೃದಯ ಕಮಲವನ್ನು ಅರಳಿಸಲು ಸಂಸ್ಕೃತ ಭಾಷೆ ಅತ್ಯಂತ ಪ್ರಯೋಜನಕಾರಿ. ಬುದ್ಧಿ ಮತ್ತು ಭಾವನೆಯ ವಿಕಾಸಕ್ಕೆ ಸಂಸ್ಕೃತ ಸಾಹಿತ್ಯ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ. ಇಂದು ಪಾಶ್ಯಾತ್ಯರು ಭಾರತೀಯ ಸಂಸ್ಕೃತಿಯ ಮೂಲವಾದ ಸಂಸ್ಕೃತವನ್ನು ಅಪ್ಪಿಕೊಲ್ಲುತಿದ್ದಾರೆ. ಭಾರತೀಯರಿಗೆ ಅದರ ಮಹತ್ವದ ಅರಿವಾಗಬೇಕೆಂಬುದು ಆಶಯ ಎಂದು ಕಟೀಲು ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತರ ಅದ್ಯಯನ ಮತ್ತು ಸಂಶೋಧನ ಕೇಂದ್ರದ ಪ್ರಾಂಶುಪಾಲರಾದ ಡಾ| ಪದ್ಮನಾಭ ಮರಾಠ್ ಹೇಳಿದರು.

sanskrita sangha

ಇವರು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಸಂಘವನ್ನು ಉದ್ಘಾಟಿಸಿ ಮಾತಣಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್‍ರವರು ಮಾತನಾಡಿ, ದೇಶದ ಪ್ರಾಚೀನ ಸಂಸ್ಕೃತಿ ಜೀವಾಳ ಸಂಸ್ಕೃತ ಭಾಷೆಯಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿರುವ ಜೀವನ ಮೌಲ್ಯ ಪಾಠಗಳನ್ನು ವೈಜ್ಞಾನಿಕ ಸಂಘತಿಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ನೀಡುವ ಕೆಲಸವನ್ನು ಸಂಸ್ಕೃತ ಸಂಘ ಮಾಡಲಿ ಎಂದು ಎಂದು ನುಡಿದರು.
ಸಂಸ್ಥೆಯ ಕಾರ್ಯದರ್ಶಿಯಾದ ರಶ್ಮಿತ ಜೈನ್‍ರವರು ಸಂಸ್ಕೃತ ದೇವ ಭಾಷೆ, ಜಗತ್ತಿನ ಎಲ್ಲರ ಜ್ಞಾನ ದಾಹ ತೀರಿಸುವ ಭಾಷೆ. ಸಂಸ್ಕಾರವಂತ ಜೀವನಕ್ಕೆ ಸಂಸ್ಕೃತದ ಅಗತ್ಯತೆಯನ್ನು ತಿಳಿಸಿದರು.
ಪ್ರೌಢಶಾಲಾ ಮುಖೋಪಾದ್ಯಾಯ ಗುರುಪ್ರಸಾದ್ ಶೆಟ್ಟಿ ಭಾವನಾತ್ಮಕ ಪ್ರಪಂಚಕ್ಕೆ ತೆರೆದುಕೊಳ್ಳಲು ಸಂಸ್ಕೃತವೇ ಮೂಲ ಎಂದು ಸಾಂದಭ್ರಿಕವಾಗಿ ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಭಿತ್ತಿಪತ್ರಿಕೆ ಉದ್ಘಾಟನೆ, ವಿದ್ಯಾರ್ಥಿಗಳಿಂದ ಕಾವ್ಯವಾಚನ ವ್ಯಾಖ್ಯಾನ, ಸ್ಪರ್ದಾವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಸ್ಕೃತ ವಿಭಾಗ ಮುಖ್ಯಸ್ಥ ತ್ತೇಜಸ್ವಿ ಭಟ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರೌಡಶಾಲಾ ಅದ್ಯಾಪಕ ಪಾರ್ಶ್ವನಾಥ ಜೈನ್ ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *