ಮೂಡುಬಿದಿರೆ: ಐಪಿಡಿಎಸ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಇಲ್ಲಿನ ಆಲಂಗಾರು ಸಮೀಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

parisheelane

ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೇಂದ್ರ ಸರಕಾರದ ಯೋಜನೆ ಇದಾಗಿದ್ದು ಈ ಯೋಜನೆಯಿಂದ ಕೋಟೆಬಾಗಿಲು-ಪುತ್ತಿಗೆ ಮತ್ತು ಪ್ರಾಂತ್ಯ ಗ್ರಾಮದ ನಿವಾಸಿಗಳಿಗೆ ವಿದ್ಯುತ್ ವೋಲ್ಟೇಜ್ ಸಮಸ್ಯೆಯು ನಿವಾರಣೆಯಾಗಲಿದೆ. ಹೈ ವೋಲ್ಟೇಜ್ ಲೈನ್‍ನ ಸಂಪರ್ಕವನ್ನು ಮಣ್ಣಿನಡಿ ಕೇಬಲ್ ಆಗಿ ಸಂಪರ್ಕಿಸುವುದರಿಂದ ವಿದ್ಯುತ್ ಕಂಬಗಳು ಕಡಿಮೆಯಾಗಲಿದೆ. ಇದರಿಂದಾಗಿ ಗಾಳಿ ಮಳೆಗೆ ವಿದ್ಯುತ್ ಕಡಿತ ಆಗುವುದು ತಪ್ಪುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ದಿನೇಶ್ ಪೂಜಾರಿ, ಪ್ರಸಾದ್, ಬಿಜೆಪಿ ಮುಖಂಡರಾದ ಜೋಯ್ಲಸ್ ತಾಕೋಡೆ, ಮೇಘನಾದ ಶೆಟ್ಟಿ, ರಂಜಿತ್ ಪೂಜಾರಿ ಸಹಾಯಕ ಕಾರ್ಯನಿರ್ವಹಣಾ ಅಭಿಯಂತರ ಸತೀಶ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *