ಬಂಟ್ವಾಳಃ ಸರಕಾರಿ ಶಾಲೆ ಉಳಿಸಿ ಆಂದೋಲನದಂಗವಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ನ ರಥಯಾತ್ರೆ ಶುಕ್ರವಾರ ಬೆಳಿಗ್ಗೆ ತಿಪಟೂರು ತಲುಪಿದ್ದು ತಿಪಟೂರು ವಿಧಾನಸಭಾ ಕ್ಷೇತ್ರ ಶಾಸಕ ಪಿ.ಸಿ.ನಾಗೇಶ್ ಮುನ್ಸಿಪಾಲಿಟಿ ವೃತ್ತದ ಬಳಿ ಬರಮಾಡಿಕೊಂಡರು. ನಂತರ ಅವರು ಮಾತನಾಡಿ , ಸರಕಾರಿ ಶಾಲೆ ಉಳಿಸುವ ಕಾರ್ಯಕ್ಕೆ ಯುವಕರ ತಂಡವೊಂದು ಕಾರ್ಯಪ್ರವೃತ್ತವಾಗಿರುವುದು ಶ್ಲಾಘನೀಯ. ಬಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಕಾರಿ ಶಾಲೆಯನ್ನು ಉಳಿಸುವ ಅನಿವಾರ್ಯತೆ ಇದ್ದು ಈ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು. ತಿಪಟೂರು ನಗರದಲ್ಲಿ ಕಾಲ್ನಡಿಗೆ ಜಾಥ ನಡೆಸಿದ ಶಾಸಕ ಪಿ.ಸಿ.ನಾಗೇಶ್ ಧ್ವಜ ಹಸ್ತಾಂತರಿಸುವ ಮೂಲಕ ತುಮಕೂರಿಗೆ ಬೀಳ್ಕೊಟ್ಟರು.

WhatsApp Image 2018-09-07 at 5.09.01 PM
ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರಾದ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ, ನವೀನ್ ಸೇಸಗುರಿ, ವಿಠಲ ಡಿ, ದೀಪಕ್ ಸಾಲ್ಯಾನ್, ಪ್ರವೀಣ್, ಉದಯ ಕರೆಂಕಿ, ನವೀನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *