ಬಂಟ್ವಾಳ: ಇಲ್ಲಿನ ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ಗುರುವಾರ ನಡೆಯಿತು.
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ನಗರ ಪ್ರದೇಶದಲ್ಲಿ ಕೂಡಾ ಆಂದೋಲನ ರೀತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ಸಿಗುತ್ತದೆ ಎಂದು ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹೇಳಿದರು.

ಇಲ್ಲಿನ ತುಂಬೆ ನೇತ್ರಾವತಿ ನದಿ ಕಿನಾರೆಯಿಂದ ಬಿ.ಎ.ಕಾಲೋನಿ, ಬಂಟರ ಭವನ, ಕಡೆಗೋಳಿ-ತುಂಬೆ ಜಂಕ್ಷನ್ ಮತ್ತಿತರ ಕಡೆಗಳಲ್ಲಿ ಪ್ರತ್ಯೇಕ ತಂಡಗಳು ತೆರಳಿ ರಾಷ್ಟ್ರೀಯ ಹೆದ್ದಾರಿ ಬಳಿ ಸ್ವಚ್ಛತಾ ಆಂದೋಲನ ನಡೆಸಿದರು.
ಜಿಲ್ಲಾ ಪಂಚಾಯಿತಿ ಸ್ವಚ್ಛತಾ ಆಂದೋಲನ ಸಂಯೋಜಕಿ ಮಂಜುಳ ಇದರ ಮಾಹಿತಿ ನೀಡಿದರು. ಬಿ.ಎ. ಕೈಗಾರಿಕಾ ತರಬೇತಿ ಕೇಂದ್ರ ಪ್ರಾಂಶುಪಾಲ ನವೀನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ.ಜಿ.ಪೂಜಾರಿ, ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ, ಸ್ವಚ್ಛತಾ ಪಿಡಿಒ ಚಂದ್ರಾವತಿ ಮತ್ತಿತರರು ಇದರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಅರುಣ್ ಕುಮಾರ್ ಬೊಳ್ಳಾರಿ, ಹರಿಣಾಕ್ಷಿ, ಜಾನಮ್ಮ, ಪ್ರಮುಖರಾದ ನಾರಾಯಣ್ ಕಿರೋಡಿಯನ್, ಗೋಪಾಲ ಬೆದ್ರಡಿ, ರಾಜೀವ ಗಾಣದಲಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.
