ಮೂರುತಿಂಗಳ ಹಿಂದೆ ವಿಧಾನ ಸಭಾ ಚುನಾವಣೆ ನಡೆದಿದ್ದು, ರಾಜ್ಯದಲ್ಲಿ ಬಿಜೆಪಿ ಅತ್ಯುನ್ನತ ಸಾಧನೆ ಮಾಡಿ ಇನ್ನೇನು ಸರಕಾರ ರಚನೆಯಲ್ಲಿರುವಾಗಲೇ ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ನಡೆಸಿ ಸರಕಾರ ರಚನೆಯಾಗಿತ್ತು. ಹೊಸ ಸರಕಾರ ರಚನೆಯ ಕೆಲವೇ ದಿನದಲ್ಲಿ ಮತ್ತೇ ಪುರಸಭೆ, ಪಟ್ಟಣ ಪಂಚಾಯತ್, ನಗರಸಭಾ ಚುನಾವಣೆ ಎಲ್ಲರನ್ನು ಕುತೂಹಲ ಮೂಡಿಸಿದೆ.
ಮೂರು ಮಹಾನಗರ ಪಾಲಿಕೆ,ಪುರಸಭೆ ಹಾಗೂ ಪಟ್ಟಣ ಪಮಚಾಯತ್‍ಗಳಲ್ಲಿ ಚುಣಾವಣೆ ನಡೆದಿತ್ತು. ಅದರ ಫಲಿತಾಂಶವು ಸೆ.3ರಂದು ಹೊರಬಿದ್ದಿದೆ. ಬೆಳಗ್ಗೆಯಿಂದ ಆಯಾಯ ಮತಕೇಂದ್ರಗಳಲ್ಲಿ ಮತ ಎಣಿಕೆ ನಡೆದಿದ್ದು, ಗೆಲುವು ಸೋಲುಗಳು ಏರುಪೇರಾಗಿದೆ. ಮೈಸೂರು, ತುಮಕೂರು, ಶಿವಮಿಗ್ಗ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಮಚಾಯತ್, ಪುರಸಭೆ ಸೇರಿದಂತೆ ಒಟ್ಟು 102 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ಚುನಾವಣೆ ನಡೆದಿತ್ತು.

Polling

ಮಹಾನಗರ ಪಾಲಿಕೆ
ಬಿಜೆಪಿ-54, ಕಾಂಗ್ರೇಸ್-36, ಜೆಡಿಎಸ್-30, ಬಿಎಸ್‍ಪಿ-01, ಪಕ್ಷೇತರ-14 =135
ನಗರಸಭೆ
ಬಿಜೆಪಿ- 370, ಕಾಂಗ್ರೇಸ್-394, ಜೆಡಿಎಸ್- 106, ಎಸ್‍ಡಿಪಿಐ-13, ಪಕ್ಷೇತರ-143=926
ಪುರಸಭೆ
ಕಾಂಗ್ರೇಸ್-514, ಬಿಜೆಪಿ-375, ಜೆಡಿಎಸ್-210, ಎಸ್‍ಡಿಪಿಐ-4, ಪಕ್ಷೇತರ-143 =1246
ಪಟ್ಟಣ ಪಂಚಾಯತ್
ಕಾಂಗ್ರೇಸ್- 138, ಬಿಜೆಪಿ-130, ಜೆಡಿಎಸ್-29, ಪಕ್ಷೇತರ-58 =355
ಫಲಿತಾಂಶಗಳ ವಿವರ:
ಪುರಸಭೆ ಚುನಾವಣೆ:
ಮಂಗಳೂರು ಬಂಟ್ವಾಳದಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದೆ.
ರಾಯಚೂರು ಜಿಲ್ಲೆಯ ಬುಡ್ಗಲ್, ಮಾನ್ವಿ ದೇವದುರ್ಗ ಹಾಗೂ ಲಿಂಗಸೂರುವಿನಲ್ಲಿ ಕಾಂಗ್ರೆಸ್ ತನ್ನ ಜಯ ಸಾಧಿಸಿದೆ.                                  ತುಮಕೂರು ಮಧುಗಿರಿಯಲ್ಲಿ ಕಾಂಗ್ರೆಸ್ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಸಾಲಿಗ್ರಾಮದಲ್ಲಿ ಬಿಜೆಪಿಗೆ ಗೆಲುವಾದರೆ ಕಾರ್ಕಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಸಮಮತ ಗೆದ್ದು ಅತಂತ್ರ ಸ್ಥಿತಿ ಉಂಟಾಗಿದೆ.
ವಿಜಯಪುರ ಜೆಲ್ಲೆಯ ಮುದ್ದೇಬಿಹಾಳದಲ್ಲಿ ಕಾಂಗ್ರಸ್ ಮತ್ತು ಬಿಜೆಪಿ ಸಮಮತದಲ್ಲಿ ಗೆಲುವು ಕಂಡಿದೆ.
ಯಾದಗಿರಿ ಗುರುವಿಠ್ಕಲ್ ಕಾಂಗ್ರೇಸ್ ಪಾಲಾಗಿದೆ.
ಬಾಗಲಕೋಟೆ ಜೆಲ್ಲೆಯ ಗುಳೇದಗುಡ್ಡ,ಬಾದಾಮಿ ಹಾಗೂ ಹುನಗುಂದದಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದು, ತೇರದಾಳ ಪುರಸಭೆ ಮಾತ್ರ ಕಾಂಗ್ರೇಸ್ ಮತ್ತು ಬಿಜೆಪಿ ಸಹಮತದಲ್ಲಿ ಅತಂತ್ರ ಸ್ಥಿತಿ ಉಂಟಾಗಿದೆ. ಇನ್ನು ಮಹಾಲಿಂಗಪುರ ಪುರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಕಾಂಗ್ರೇಸ್ ಸೋಲು ಕಂಡಿದೆ.
ಬೆಳಗಾವಿ ಜಿಲ್ಲೆಯ ಒಟ್ಟು 10 ಪುರಸಭೆಯಲ್ಲಿ ಮೂಡಲಗಿ, ರಾಮದುರ್ಗ, ಸವದತ್ತಿ, ಚಿಕ್ಕೋಡಿ,ಸದಲಗದ 5 ಪುರಸಭೆಯಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿದೆ. ಬೈಲಹೊಂಗಲ,ಕುಡಚಿ, ಹುಕ್ಕೇರಿಯಲ್ಲಿ ಕಾಂಗ್ರೇಸ್ ಗೆಲುವು. ಸಂಕೇಶ್ವರದಲ್ಲಿ ಕಾಂಗ್ರೇಸ್ ಬಿಜೆಪಿ ಸಮಮತ ಪಡೆದಿದೆ. ಆದರೆ ಒಂದು ಸ್ಥಾನವನ್ನು ಕೆಣ್ಣೂರು ಮಾತ್ರ ಪಕ್ಷೇತರ ಪಾಲಾಗಿದೆ.
ಬೀದರ್ ಹಳ್ಳಿಖೇಡದಲ್ಲಿ ಕಾಂಗ್ರೇಸ್ ಗೆಲುವು.
ಚಿತ್ರದುರ್ಗದಲ್ಲಿ ಬಿಜೆಪಿ ಗೆಲುವು.
ದಾವನಗೆರೆ ಚೆನ್ನಗಿರಿಯಲ್ಲಿ ಕಾಂಗ್ರೇಸ್ ಬಿಜೆಪಿ ಸಮಮತವಾಗಿದೆ.
ಗದಗ ಜಿಲ್ಲೆಯ ರೋಣ ಮತ್ತು ಲಕ್ಷ್ಮೇಶ್ವರ ಕಾಂಗ್ರೇಸ್ ಪಾಲಾಗಿದೆ. ಹಾಗೂ ಗಜೇಂದ್ರಗಢ ಬಿಜೆಪಿ ಗೆಲುವು ಸಾಧಿಸಿದೆ.
ಹಾಸನ ಕ್ಲೀನ್ ಸ್ವೀಪ್ ಆಗಿದೆ. ಸಕಲೇಶಪುರ, ಹೊಳೆನರಸಿಪುರ ಹಾಗೂ ಚೆನ್ನರಾಯಪಟ್ಟಣ ಎಂದಿನಂತೆ ಸಂಪೂರ್ಣವಾಗಿ ಜೆಡಿಎಸ್ ಪಾಲಾಗಿದೆ.
ಹಾವೇರಿ ಸವಣೂರು ಮತ್ತು ಹಾನಗಲ್ ಎರಡು ಪುರಸಭೆ ಕಾಂಗ್ರೇಸ್ ಪಾಲಾಗಿದೆ.
ಕಲಬುರ್ಗಿ ಜೀವರ್ಗಿ ಮತ್ತು ಸೇಡಂ ಬಿಜೆಪಿ ಗೆದ್ದರೆ, ಅಫ್ಜಲ್‍ಪುರದಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದೆ. ಆಳಂದ ಕಾಂಗ್ರೇಸ್ ಬಿಜೆಪಿ ಸಮಮತ ಗೆಲುವು.
ಕಾರವಾರ ಕುಮಟಾ ಹಾಗೂ ಹಳಿಯಾಳ ಕಾಂಗ್ರೇಸ್ ಪಾಲಾದರೆ, ಅಂಕೋಲಾ ಬಿಜೆಪಿ ಪಾಲಾಗಿದೆ.
ಕೊಪ್ಪಳ ಕುಷ್ಟಗಿಯಲ್ಲಿ ಕಾಂಗ್ರೇಸ್ ಮತ್ತು ಮಂಡ್ಯ ಪಾಂಡವಪುರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಪಟ್ಟಣ ಪಂಚಾಯತ್ ಫಲಿತಾಂಶಗಳ ವಿವರ:
ಬಿಜೆಪಿ ಗೆಲುವು ಪಡೆದ ವಾಡ್‍ಗಳು:
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು. ಬಾಗಲಕೋಟೆ ಬೀಳಗಿ ಹಾಗೂ ತೇರೂರು. ದಾವಣಗೆರೆ ಹೊನ್ನಾಳಿ ಹಾಗೂ ಜಗಳೂರು. ಉಡುಪಿ ಸಾಲಿಗ್ರಾಮ. ಕೊಪ್ಪಳ ಯಲಬುರ್ಗಿ. ಗದಗ ಜಿಲ್ಲೆಯ ನರೇಗಲ್.
ಕಾಂಗ್ರೇಸ್ ಗೆಲುವು ಪಡೆದ ವಾರ್ಡ್‍ಗಳು:
ಉತ್ತರ ಕನ್ನಡ – ಯಲ್ಲಾಪುರ. ಬಳ್ಳಾರಿ -ಕುಡುತಿನಿ ಹಾಗೂ ಕೊಟ್ಟೂರು. ರಾಯಚೂರು -ಹಟ್ಟಿ. ಮಂಡ್ಯ– ಬೆಳ್ಳೂರು. ಬೆಳಗಾವಿ -ಖಾನಪುರ ಹಾಗೂ ರಾಯಬಾಗ. ಗದಗ-ಮುಳಗುಂದ,ಶಿರಹಟ್ಟಿ. ಹಾವೇರಿ-ಹಿರೇಕೂರೂರು.
ಜೆಡಿಎಸ್ ಗೆಲುವು ಪಡೆದ ವಾರ್ಡ್‍ಗಳು:
ತುಮಕೂರು– ಗುಬ್ಬಿ ಹಾಗೂ ಕೊರಟಗೆರೆ.

ನಗರಸಭೆ ಫಲಿತಾಂಶ:
ಬಿಜೆಪಿ ಗೆಲುವು ಪಡೆದ ನಗರಸಭೆ:
ಬನಹಟ್ಟಿ,ನಿಪ್ಪಾಣಿ, ಚಾಮರಾಜನಗರ, ಚಿತ್ರದುರ್ಗ, ಪುತ್ತೂರು, ರಾಣೇಬೆನ್ನೂರು, ರಾಯಚೂರು, ಉಡುಪಿ ಶಿರಸಿ, ಯಾದಗಿರಿ, ಬಾಗಲಕೋಟೆ, ಇಳಕಲ್, ಮುಧೋಳ ಹಾಗೂ ಸುರಪುರ.
ಕಾಂಗ್ರೇಸ್ ಗೆಲುವು ಪಡೆದ ನಗರಸಭೆ:
ಚಳ್ಳಕೆರೆ, ಉಳ್ಳಾಲ,ಹಾವೇರಿ, ಶಹದಾಳ, ಕೊಪ್ಪಳ, ಗಂಗಾವತಿ, ಸಿಂಧನೂರು, ದಾಂಡೇಲಿ, ಜಮಕಂಡಿ,
ಜೆಡಿಎಸ್ ಗೆಲುವು ಪಡೆದ ನಗರಸಭೆ:
ಹಾಸನ, ಅರಸಿಕೆರೆ, ಮಂಡ್ಯ,
ಪಕ್ಷೇತರ: ಗೋಕಾಕ್, ಕೊಳ್ಳೆಗಾಲ

ಮಹಾನಗರಪಾಲಿಕೆ ಫಲಿತಾಂಶ:
ಶಿವಮೊಗ್ಗ ಬಿಜೆಪಿ ಗೆಲುವು ಸಾಧಿಸಿದರೆ, ತುಮಕೂರು ಹಾಗೂ ಮೈಸೂರು ಕಾಂಗ್ರೇಸ್ ಹಾಗೂ ಬಿಜೆಪಿ ಸಮಮತದಿಂದ ಅತಂತ್ರ ಸ್ಥಿತಿ ಉಂಟಾಗಿದೆ.

By suddi9

Leave a Reply

Your email address will not be published. Required fields are marked *