ಕೈಕಂಬ:ಕಳೆದ ಹದಿನೆಂಟು ವರ್ಷಗಳಿಂದ ತಲೆಮರೆಸಿಕೊಂದಿದ್ದ ಆರೋಪಿಯೊರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಕೈಕಂಬ ಬಳಿಯ ಕಿನ್ನಿಕಂಬಳ ನಿವಾಸಿ ಕೆ.ಶೇಖಬ್ಬ ಎಂಬವರ ಮಗ ಫಯಾಜ್ ಅಲಂ (43) ಎಂಬಾತ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಕಳೆದ ಹದಿನೆಂಟು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ನಿನ್ನೆ ರಾತ್ರಿ ದುಬಾಯಿಗೆ ತೆರಳಲು ಬಜಪೆ ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ಪಡೆದಿದ್ದ ಬಜಪೆ ಪೊಲೀಸರು ಆರೋಪಿ ಆಗಮಿಸುತ್ತಿದ್ದಂತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
