ಕುಪ್ಪೆಪದವು: ಅಲ್ಪ ಕಾಲದ ಅಸೌಖ್ಯದಿಂದ ಗಂಜಿಮಠ ಸಮೀಪದ ಮಳಲಿ ಕಕ್ಕೂರಿ ನಿವಾಸಿ ದಿ| ಐತ್ತಪ್ಪ ಎಂಬವರ ಪುತ್ರ, ಬಿಜೆಪಿ ಕಾರ್ಯಕರ್ತ ಕರುಣಾಕರ(30) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡಿದ್ದ ಅವರಿಗೆ ಅಸೌಖ್ಯ ಉಂಟಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಸಹೋದರಿಗೆ ಮದುವೆ ನಿಶ್ಚಯವಾಗಿತ್ತು.

karunakarಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಇವರ ಸಾವಿನಿಂದ ಮನೆಯ ಆಧಾರ ಸ್ಥಂಭವೇ ಕುಸಿದಂತಾಗಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದುಕೊಂಡು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದರು. ಇವರು ತಾಯಿ, ಸಹೋದರ-ಸಹೋದರಿ, ಒಬ್ಬರು ಪುತ್ರ ಹಾಗೂ ಮಡದಿಯನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *