ಮೂಡುಬಿದಿರೆ: ಭಾರತೀಯ ಜೇಸಿಸ್‍ನ ರಾಷ್ಟ್ರೀಯ ಅಧ್ಯಕ್ಷ ಅರ್ಪಿತ್ ಹಾತಿ ಬುಧವಾರ ಮೂಡುಬಿದಿರೆ ಜೆಸಿಐ ತ್ರಿಭುವನ್‍ಗೆ ಅಧಿಕೃತ ಭೇಟಿ ನೀಡಿದರು.

JCI

ಅವರನ್ನು ಮೂಡುಬಿದಿರೆ ಜೇಸಿಸ್ ಅಧ್ಯಕ್ಷೆ ಸಂಗೀತ ಪ್ರಭು ಹಾಗೂ ಪದಾಧಿಕಾರಿಗಳು ಅವರನ್ನು ಸ್ವಾಗಸಿಕೊಂಡರು. ಮೂಡುಬಿದಿರೆ ಬಸ್ ನಿಲ್ದಾಣ ಸಮೀಪವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೇಸಿ ಕೊಡುಗೆಯಾಗಿ ಸುಮಾರು 18 ಸಾವಿರ ವೆಚ್ಚದ ಶುದ್ಧ ಕುಡಿಯುವ ನೀರು ಘಟಕವನ್ನು ಒದಗಿಸಿದ್ದು ಅರ್ಪಿತ್ ಹಾತಿ ಅದನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಸಮಾಜ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಅರ್ಪಿತ್ ಹಾತಿ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆ ತ್ರಿಭುವನ್ ಜೇಸಿಸ್ ಮೂಲಕ ಪ್ರಾರಂಭಿಸಲಾದ ಪೆರ್ಡೂರು ಜೇಸಿಸ್‍ಗೆ ಮೂಲಧನದ ಡಿಡಿಯನ್ನು ಸಂಗೀತ ಪ್ರಭು ಹಸ್ತಾಂತರಿಸಿದರು.
ಅರ್ಪಿತ್ ಹಾತಿ ಮಾತನಾಡಿ, ಮೂಡುಬಿದಿರೆಯಲ್ಲಿ ಬಲಿಷ್ಠವಾಗಿರುವ ಜೇಸಿಸ್ ಹತ್ತು ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ಅಕ್ಟೋಬರ್‍ನಲ್ಲಿ ಗೋವಾದಲ್ಲಿ ನಡೆಯಲಿರುವ ವಲ್ರ್ಡ್ ಜೇಸಿ ಕಾಂಗ್ರೇಸ್ ಸಮ್ಮೇಳನದಲ್ಲಿ ಹೆಚ್ಚಿನ ಸದಸ್ಯರು ಪಾಲ್ಗೊಳ್ಳುವಂತೆ ವಿನಂತಿಸಿದರು.
ವಲಯಾಧ್ಯಕ್ಷ ರಾಕೇಶ್ ಕುಂಜೂರು, ಉಪಾಧ್ಯಕ್ಷ ಪಶುಪತಿ ಶರ್ಮ, ವಲಯ ತರಬೇತಿ ನಿರ್ದೇಶಕ ಧೀರೇಂದ್ರ ಜೈನ್, ಜೇಸಿರೇಟ್ ಅಧ್ಯಕ್ಷೆ ಶಾಂತಲಾ ಎಸ್ ಆಚಾರ್ಯ ನಿಕಟಪೂರ್ವ ಅಧ್ಯಕ್ಷ ಸಂತೋಷಕುಮಾರ್, , ಜೆಸಿಐ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *