ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ವಿಟ್ಲ ವಲಯದ ನಿಕಟ ಪೂರ್ವ ಅಧ್ಯಕ್ಷ ನರಸಿಂಹ ಬಳ್ಳಾಲ್ ಉದ್ಘಾಟಿಸಿದರು.

vitla-udgatane
ವಿಟ್ಲ ವಲಯ ಮೇಲ್ವಿಚಾರಕಿ ಪ್ರಸ್ತಾವಿಸಿ ತರಬೇತಿ ನೀಡಿದರು. ಕೇಪು ವಲಯದ ಮೇಲ್ವಿಚಾರಕ ಸಂದೇಶ್, ಲೆಕ್ಕ ಪರಿಶೋದಕಿ ಯಶೋದಾ ಮತ್ತು ಕೃಷಿ ಅಧಿಕಾರಿ ಮುರಳೀಧರ ಸಹಕರಿಸಿದರು.
ವಿಟ್ಲ ವಲಯದ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೆತ್ತೂರು ಒಕ್ಕೂಟದ ಸೇವಾಪ್ತಿನಿಧಿ ಪ್ರಕಾಶ್, ಆಲಂಗಾರು ಒಕ್ಕೂಟದ ಸೇವಾ ಪ್ರತಿನಿಧಿ ಮೋಹನ ಉಪಸ್ಥಿತರಿದ್ದರು. ಕುಳ ಒಕ್ಕೂಟದ ಸೇವಾ ಪ್ರತಿನಿಧಿ ಯಶೋದಾ ಸ್ವಾಗತಿಸಿದರು. ಉಕ್ಕುಡ ಒಕ್ಕೂಟದ ಸೇವಾ ಪ್ರತಿನಿಧಿ ಹೇಮಲತಾ ವಂದಿಸಿ, ನಿರೂಪಿಸಿದರು.

By suddi9

Leave a Reply

Your email address will not be published. Required fields are marked *