ಬಂಟ್ವಾಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಮತದಾರ ಬಂಧುಗಳು ಭಾರತೀಯ ಜನತಾ ಪಾರ್ಟಿಯ ಮೇಲೆ ವಿಶ್ವಾಸವಿಟ್ಟು ಮತ ನೀಡಿ ನನ್ನ ಅಭೂತ ಪೂರ್ವ ಗೆಲುವಿಗೆ ಕಾರಣಕರ್ತರಾಗಿದ್ದೀರಿ. ತಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದು, ಅಗೋಸ್ಟ್ 31ರ ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸಮರ್ಥ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಆಶೀರ್ವದಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.

rajesh naik
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿಗೆ ಮಹತ್ವ ನೀಡಲಾಗಿದೆ. ಅದರಲ್ಲಿ ಸ್ವಚ್ಫತೆ, ಸಮಗ್ರ ಒಳಚರಂಡಿ ವ್ಯವಸ್ಥೆ, ಭ್ರಷ್ಟಾಚಾರ ಮುಕ್ತ ಆಡಳಿತ, ಶುದ್ಧ ಕುಡಿಯುವ ನೀರಿನ ಪೂರೈಕೆ, ಪ್ಲ್ಲಾಸ್ಟಿಕ್ ಮುಕ್ತ ಪುರಸಭೆ, ಪುರಸಭಾ ವ್ಯಾಪ್ತಿಯಲ್ಲಿ ಮೂರು ತಿಂಗಳಿಗೊಮ್ಮೆ ವಾರ್ಡ್ ಸಭೆ, ಬಿ.ಸಿ.ರೋಡಿನ ನಗರ ಸುಂದರೀಕರಣಕ್ಕೆ ಆದ್ಯತೆ, ನಗರದ ಆಯ್ದ ಭಾಗಗಳಲ್ಲಿ ಖಾಸಗಿ ಹಾಗೂ ಸಾರಿಗೆ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಬಿ.ಸಿ.ರೋಡಿನ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದ ಎದುರು ವೃತ್ತವನ್ನು ನಿರ್ಮಿಸಿ ಎಲ್ಲಾ ಸರಕಾರಿ ಬಸ್ಸುಗಳು ನಿಲ್ದಾಣದೊಳಗೆ ಬರುವ ವ್ಯವಸ್ಥೆ, ಪುರಸಭೆಯ ವಿವಿಧ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಇವುಗಳ ಅನುಷ್ಠಾನದ ಜೊತೆ ಪುರಸಭೆಯ ಸರ್ವತೋಮುಖ ಅಭಿವೃದ್ಧಿ, ಜನಪರ, ಪಾರದರ್ಶಕ ಆಡಳಿತಕ್ಕಾಗಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳನ್ನು ಬಹುಮತದಿಂದ ಪಕ್ಷದ ಗೇಲುವಿಗಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *