ಬಂಟ್ವಾಳ: ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಾಲಗೋಕುಲ ಸಮಿತಿಯನ್ನು ರಚಿಸಲಾಯಿತು. ಈ ಕಾರ್ಯಕ್ರಮವನ್ನು ಗುಲಾಬಿ ರಾಘವ ಗೌಡ ಅಡ್ಡಾಲಿ ಉದ್ಘಾಟಿಸಿದರು. ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ಇವರು ಸಮಿತಿಯ ಕಾರ್ಯಸೂಚಿಗಳನ್ನು ನೀಡಿದರು.

mameshvara (2)

mameshvara (1)
ಈ ಸಂದರ್ಭದಲ್ಲಿ ಮಾಮೇಶ್ವರ ಸಮಿತಿ ಸಂಚಾಲಕ ಉದಯ ಕುಮಾರ್ ನಾಯ್ತೊಟ್ಟು, ವೀರಪ್ಪ ಗೌಡ ರಾಯರಬೆಟ್ಟು, ಕೇಶವ ವಿಟ್ಲ, ಊರಿನ ಹಿರಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಶ್ವನಾಥ ನಾಯ್ತೊಟ್ಟು ಸ್ವಾಗತಿಸಿ, ನಿರೂಪಿಸಿದರು. ಮೋನಪ್ಪ ಗೌಡ ರಾಯರಬೆಟ್ಟು ವಂದಿಸಿದರು.

By suddi9

Leave a Reply

Your email address will not be published. Required fields are marked *