ಮೂಡುಬಿದಿರೆ: ಆಳ್ವಾಸ್ ಪ.ಪೂ.ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಸಂರಕ್ಷಣಾ ಕಲೆಗಳ ತರಬೇತಿ ಕಾರ್ಯಕ್ರಮ ಶನಿವಾರ ನಡೆಯಿತು.

ಸುಮಾರು 400ಕ್ಕೂ ಅಧಿಕ ಸಂಸ್ಥೆಗಳಲ್ಲಿ 700ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ 1 ಲಕ್ಷ 30 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿರುವ ತರಬೇತುದಾರ ಕಾರ್ತಿಕ್ ಎಸ್.ಕಟೀಲ್ ಹಾಗೂ ಅವರ ತಾಯಿ ಶೋಭಲತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಆಳ್ವಾಸ್ ಪ.ಪೂ. ಕಾಲೇಜಿನ 600ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕಲೆಯ ಸರಳ ತಂತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿ, ಮಹಿಳೆಯರಿಗೆ ಆತ್ಮರಕ್ಷಣಾ ಕಲೆಗಳ ಅಗತ್ಯತೆಯನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಸಾಮಾಜಿಕ ಜಾಲತಾಣಗಳ ಹಿತಮಿತ ಬಳಕೆಯ ಕುರಿತಾಗಿ ತಿಳಿಸಿ, ಸಂಕೀರ್ಣ ಸಂದರ್ಭಗಳನ್ನು ಎದುರಿಸುವಲ್ಲಿ ಹಾಗೂ ಮಾನಸಿಕ ಧೈರ್ಯವನ್ನು ತುಂಬುವಲ್ಲಿ ಸ್ವರಕ್ಷಣಾ ಕಲೆಗಳು ಅತ್ಯಂತ ಸಹಕಾರಿ ಎಂದರು.
ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕಿ ಡಾ.ರೂಪಾ ಎಸ್.ಭಟ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾಸ್ವತ್ ಸುಮನ್ ಕಾರ್ಯಕ್ರಮ ನಿರ್ವಹಿಸಿದರು.
