ಮೂಡುಬಿದಿರೆ: ‘ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯ ಅರಿವು ಇಂದಿನ ಯುವಕರಿಗೆ ಅವಶ್ಯಕವಾಗಿದೆ. ಜಾತಿ, ಮತ, ಪಂಥ, ಭಾಷೆಯಂತಹ ನಾನಾ ವಿಚಾರಗಳಲ್ಲಿ ನಾವಿಂದು ಋಣಾತ್ಮಕವಾಗಿ ಸೂಕ್ಷ್ಮವಾಗುತ್ತಾ ಹೋಗುತ್ತಿದ್ದೇವೆ. ಇದು ಧನಾತ್ಮಕ ಮನೋಭಾವವಾಗಿ ಬದಲಾಗಬೇಕಿದೆ. ನಾವೇ ಸೃಷ್ಟಿಸಿಕೊಂಡಿರುವ ಗೋಡೆಗಳನ್ನು ಕೆಡವಿ ವಿಶ್ವಮಾನವರಾಗಬೇಕಿದೆ’ ಎಂದು ಮಹಾವೀರ ಪದವಿ ಕಾಲೇಜಿನ ಕನ್ನಡ ವಿಭಾಗಾಧ್ಯಕ್ಷ ಡಾ. ಚಿನ್ನಸ್ವಾಮಿ ತಿಳಿಸಿದರು.

sadbhavana day
ಶ್ರೀ ಮಹಾವೀರ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ. ರಮೇಶ್ ಭಟ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಅಜಾಜ್ ಅಹಮದ್ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರಮೀಳಾ ಚೊಕ್ಕಾಡಿ ಸ್ವಾಗತಿಸಿ, ಪದವಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಸುಲೋಚನಾ ಪಚ್ಚಿನಡ್ಕ ವಂದಿಸಿದರು.

By suddi9

Leave a Reply

Your email address will not be published. Required fields are marked *