ಸುದ್ದಿ9ಮಂಗಳೂರು: ಕದ್ರಿ ಉದ್ಯಾನವನದ ಅಭಿವೃದ್ಧಿಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ ಆ.31 ರಂದು ಕದ್ರಿ ಬಾಲಭವನದಲ್ಲಿ ಅಧಿಕಾರಿಗಳ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆಯು ನಿಗದಿಯಾಗಿತ್ತು. ಆದರೆ ಸದ್ರಿ ಸಭೆಯು ರದ್ದುಗೊಂಡಿರುವುದೆಂದು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ. ಸದ್ರಿ ಸಭೆಯಲ್ಲಿ ಮಂಡಿಸಲು ಸಿದ್ಧಪಡಿಸಿದ ನನ್ನ ಲಿಖಿತ ಸಲಹೆಗಳನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ.
ಈ ಮಧ್ಯೆ ಮಾನ್ಯ ಶಾಸಕರು ಕಾಂಗ್ರೆಸ್ ನಿಯೋಗದೊಂದಿಗೆ ಕದ್ರಿ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಗ್ಗೆ ಇಲ್ಲಿಯ ಸ್ಥಳೀಯ ಜನಪ್ರತಿನಿಧಿಯಾದ ನನಗೆ ಮಾಹಿತಿ ನೀಡಿರುವುದಿಲ್ಲ. ಕದ್ರಿ ಉದ್ಯಾನವನಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳ ಸಮಾಲೋಚನೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಯನ್ನು ಕಡೆಗಣಿಸುತ್ತಿರುವ ಶಾಸಕರ ಕ್ರಮವು ವಿಷಾದನೀಯವಾಗಿದೆ. ಓರ್ವ ಉನ್ನತ ಸರಕಾರಿ ಅಧಿಕಾರಿಯಾಗಿದ್ದ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಈ ರೀತಿ ರಾಜಕೀಯ ತಾರತಮ್ಯ ಮಾಡುತ್ತಿರುವುದು ಅವರ ಘನತೆಗೆ ತಕ್ಕುದಾದಲ್ಲ.
ರೂಪ ಡಿ. ಬಂಗೇರ
ಕದ್ರಿ ಉದ್ಯಾನವನದ ಅಭಿವೃದ್ಧಿಗೆ ಸಲಹೆಗಳು:-
1. ಕದ್ರಿ ಪಾರ್ಕ್ ನಗರದ ಏಕೈಕ ದೊಡ್ಡ ಉದ್ಯಾನವನ ಆಗಿದ್ದು, ಭಾನುವಾರ ಮತ್ತು ರಜಾ ದಿನಗಳಲ್ಲಿ ಇಲ್ಲಿ ವಾಹನ ಮತ್ತು ಜನದಟ್ಟಣೆ ಜಾಸ್ತಿಯಾಗಿರುತ್ತದೆ. ಈಗ ಇಲ್ಲಿ ವಾಹನಗಳನ್ನು ರಸ್ತೆಗಳ ಇಕ್ಕೆಲಗಳಲ್ಲಿ ನಿಲ್ಲಿಸುತ್ತಿದ್ದು, ವ್ಯವಸ್ಥಿತ ವಾಹನ ಪಾರ್ಕಿಂಗ್ ಸೌಲಭ್ಯ ಇಲ್ಲ. ಆದ್ದರಿಂದ ಉದ್ಯಾನವನದ ಒಂದು ಬದಿಯಲ್ಲಿ ಅಥವಾ ತೋಟಗಾರಿಕಾ ಇಲಾಖೆಗೆ ಸೇರಿದ ಹತ್ತಿರದ ಜಾಗಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕು.
2. ಕದ್ರಿ ಉದ್ಯಾನವನಕ್ಕೆ ಈಗ ಒಂದು ಪ್ರವೇಶ ದ್ವಾರ ಮಾತ್ರವಿದ್ದು ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಮುಖ್ಯದ್ವಾರ ಇರುವುದಿಲ್ಲ. ಇದರಿಂದಾಗಿ ಈಗ ಒಂದೇ ರಸ್ತೆಯಲ್ಲಿ ಸಂಜೆ ವೇಳೆಗೆ ವಾಹನದಟ್ಟಣೆಯಾಗುತ್ತಿದೆ. ಇದನ್ನು ನಿವಾರಿಸಲು ಹಾಗೂ ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಬರುವ ಪಾದಚಾರಿಗಳಿಗೂ ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿ ಕಡೆಯಿಂದಲೂ ಮುಖ್ಯ ದ್ವಾರವನ್ನು ನಿರ್ಮಿಸಬೇಕು. ಈಗ ಇರುವ ಮುಖ್ಯದ್ವಾರವನ್ನು ಕಲಾತ್ಮಕ ಮಾದರಿಯಲ್ಲಿ ಆಕರ್ಷಕಗೊಳಿಸಬೇಕು.
3. ಕದ್ರಿ ಉದ್ಯಾನವನಕ್ಕೆ ಹಲವು ದಶಕಗಳ ಇತಿಹಾಸವಿದ್ದರೂ, ಇಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಚಿಕ್ಕಪುಟ್ಟ ವ್ಯಾಪಾರಸ್ಥರಿಗೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದು ಉದ್ಯಾನವನದ ಹೊರಗಿನ ಅಂದವನ್ನು ಹಾಳುಮಾಡುತ್ತಿದೆ. ಆದ್ದರಿಂದ ಇಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಮೊದಲ ಆದ್ಯತೆ ನೀಡಿ ಇನ್ನು ಹೆಚ್ಚು ಸಂಖ್ಯೆಯಲ್ಲಿ ವ್ಯವಸ್ಥಿತ ಆಕರ್ಷಕ ರೀತಿಯಲ್ಲಿ ಫುಡ್ಕೌಂಟರ್ಗಳನ್ನು ಇಲಾಖೆಯ ವತಿಯಿಂದ ನಿರ್ಮಿಸಿ ಬಾಡಿಗೆ ಆಧಾರದಲ್ಲಿ ಹಂಚಬೇಕು.
4. ಕದ್ರಿ ಉದ್ಯಾನವನದ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು, ಕೆಸರು ತುಂಬಿರುತ್ತದೆ. ರಸ್ತೆಯ ಬದಿಯಲ್ಲಿ ಆಗಿಂದಾಗ್ಗೆ ಅಗೆಯುವುದನ್ನು ನಿಷೇಧಿಸಬೇಕು. ಹಾಗೂ ರಸ್ತೆಯನ್ನು ಧೂಳು ರಹಿತ ಮಾದರಿ ರಸ್ತೆಯನ್ನಾಗಿ ಪರಿವರ್ತಿಸಬೇಕು .
5. ರಾಜ್ಯದ ಇತರ ಉದ್ಯಾನವನಗಳಿಗೆ ಹೋಲಿಸಿದರೆ ಕದ್ರಿ ಉದ್ಯಾನವನದ ನಿರ್ವಹಣೆ ತುಂಬಾ ಕಳಪೆ ಎಂದೇ ಹೇಳಬಹುದು. ಪಾರಕ ನ ಹೃದಯ ಭಾಗದಲ್ಲಿ ಸುಂದರ ವಿನ್ಯಾಸದ ಗಿಡಗಳ ಕಟ್ಟಿಂಗ್ ಇಲ್ಲದಿರುವುದು, ವಿದ್ಯುತ್ ದೀಪಗಳು ಉರಿಯದಿರುವುದು, ಬೀದಿ ನಾಯಿಗಳ ಕಾಟ, ಪಾರ್ಕ್ಪ್ ಹೊರವೃತ್ತದಲ್ಲಿ ಆಳೆತ್ತರ ಬೆಳೆದು ನಿಂತಿರುವ ಗಿಡಪೊದೆಗಳು ಪಾಕರ್್ನ ಸೌದರ್ಯವನ್ನು ಕುಗ್ಗಿಸುವಂತಿದೆ.
6. ಪಾರ್ಕ್ ಪುಟಾಣಿಗಳಿಗಾಗಿ ಇರುವ ಹಳೆಯ ಆಟಿಕೆಗಳನ್ನು ತೆರವುಗೊಳಿಸಿ ಆಕರ್ಷಕ ನವೀನ ಮಾದರಿಯ ವೈವಿಧ್ಯತೆಯನ್ನು ಹೊಂದಿರುವ ಆಟಿಕೆಗಳನ್ನು ಅಳವಡಿಸಿರಬೇಕು.
7. ಪಾರ್ಕ್ಲ್ಲಿ ಅವಕಾಶ ಇರುವಲ್ಲಿ ಬಾತುಕೋಳಿ, ಆಮೆಯಂತಹ ಚಿಕ್ಕಪುಟ್ಟ ಜಲಚರ ಜೀವಿಗಳ ಸಂಗ್ರಹಕ್ಕೆ ಅವಕಾಶ ನೀಡಬೇಕು ಹಾಗೂ ಕುದುರೆ ಸವಾರಿಯಂತಹ ಮನರಂಜನಾ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಹಾಗೂ ವ್ಯವಸ್ಥಿತವಾದ ಮ್ಯೂಸಿಕಲ್ ಕಾರಂಜಿಯನ್ನು ನಿ ರ್ಮಸಬೇಕು.
8. ಕದ್ರಿ ಪಾರ್ಕ್ ಒಳಗಡೆ ಮತ್ತು ಸುತ್ತಮುತ್ತ ಅನೈತಿಕ ಹಾಗೂ ಅಪರಾಧ ಚಟುವಟಿಕೆಯನ್ನು ನಿಯಂತ್ರಿಸಲು ಸಿ.ಸಿ ಕ್ಯಾಮರಾಗಳನ್ನು ಅಳವಡಿಸಬೇಕು.
9. ಕದ್ರಿ ಉದ್ಯಾನವನದ ಸಮೀಪ ಅಂದರೆ ಸಕರ್ೂ್ಯಟ್ ಹೌಸ್ ಸಮೀಪದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಲು ಈಗಾಗಲೇ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿರುತ್ತೇನೆ. ಇದನ್ನು ಆದಷ್ಟು ಶೀಘ್ರ ಕಾರ್ಯರೂಪಗೊಳಿಸಬೇಕು.
10. ಪ್ರತೀ ಭಾನುವಾರ ಸಂಜೆ (ಮಳೆಗಾಲ ಹೊರತುಪಡಿಸಿ) ಉಳಿದ ಸಮಯದಲ್ಲಿ ಪಾರ್ಕ್ ಒಳಗಿರುವ ವೇದಿಕೆಯಲ್ಲಿ ಜಾನಪದ, ಸಂಗೀತ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕಲೆಗಳಿಗೂ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
11. ಉದ್ಯಾನವನದ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು. ಸೋಲಾರ್ ದೀಪಗಳಿಗೆ ಪ್ರಾಶಸ್ತ್ಯ ನೀಡಬೇಕು.
12. ಉದ್ಯಾನವನದ ಪ್ರಮುಖ ರಸ್ತೆ, ಚರಂಡಿ ಹಾಗೂ ಫುಟ್ಪಾತ್ನ್ನು ಅಭಿವೃದ್ಧಿಪಡಿಸಬೇಕು, ಪಾರ್ಕ್ ಹೊರಭಾಗವಾದ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಗರದ ಇತರ ಪ್ರದೇಶಗಳಿಂದ ಮಣ್ಣು ಕಸಗಳನ್ನು ತಂದು ರಾಶಿ ಹಾಕುತ್ತಿದ್ದು, ಇದರಿಂದ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಕಸ ಮಣ್ಣುಗಳನ್ನು ಹಾಕದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಬಗ್ಗೆ ಕ್ರಮ ಕೈಗೊಳ್ಳಬೇಕು.
13. ಜಿಲ್ಲೆಯ ಇತರ ಪ್ರವಾಸಿ ತಾಣಗಳ ಆಕರ್ಷಕ ಚಿತ್ರ ಸಹಿತ ಪರಿಚಯಾತ್ಮಕ ವಿವರಣೆಗಳೊಂದಿಗೆ ಹೋಡರ್ಿಂಗ್ಸ್ ಹಾಗೂ ಮಂಗಳೂರು/ಕರಾವಳಿ ವೈಶಿಷ್ಟ್ಯವನ್ನು ಬಿಂಬಿಸುವ (ಕಂಬಳ, ಯಕ್ಷಗಾನ, ಮೀನುಗಾರಿಕೆ, ಭೂತ, ಕೋಲಾ ಇತ್ಯಾದಿ) ಕಲಾಕೃತಿಗಳನ್ನು ಪಾರ್ಕ್ ಒಳಗಡೆ ಅಳವಡಿಸಬೇಕು.
