ಬಂಟ್ವಾಳ:ತಾಲ್ಲೂಕಿನ ಕಳ್ಳಿಗೆ ನಿವಾಸಿ, ಮೇಕಪ್ ಕಲಾವಿದ ಭಾಸ್ಕರ ಆಚಾರ್ಯ(64) ಅಸೌಖ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

‘ಕಳ್ಳಿಗೆ ಬಾಚಣ್ಣ ‘ ಎಂದೇ ಖ್ಯಾತರಾಗಿದ್ದ ಇವರು ಕಳ್ಳಿಗೆಯಲ್ಲಿ ಪೊರ್ಲು ಆಟ್ರ್ಸ್ ಸಂಸ್ಥೆಯನ್ನು ಕಳೆದ ನಾಲ್ಕು ದಶಕಗಳಿಂದ ನಡೆಸುತ್ತಿದ್ದರು. ಪಚ್ಚಿನಡ್ಕ ಶುಭ ಯುವಕ ಮಂಡಲ, ಓಂ ಫ್ರೆಂಡ್ಸ್ ಪಚ್ಚಿನಡ್ಕ ಸಂಘಟನೆ, ಪುತ್ತೂರು ಭಾವನಾ ಕಲಾ ಆಟ್ರ್ಸ್ನಲ್ಲಿ ಮೇಕಪ್ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
