ಬಂಟ್ವಾಳ : ಟುಡೇ ಫೌಂಡೇಶನ್ ಫರಂಗಿಪೇಟೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಬೆಳ್ಳಗೆ ಸರಕಾರಿ ಫ್ರೌಢ ಶಾಲೆ ಸುಜೀರ್, ಪುದು ಬಂಟ್ವಾಳದಲ್ಲಿ ಆಗಸ್ಟ್ 19 ನೇ ಆದಿತ್ಯವಾರ ನಡೆಯಿತು.
ಮದ್ರಾಸ ವಿದ್ಯಾರ್ಥಿ ಮರ್ಷದ್ ಮಾರಿಪಳ್ಳ ರವರು ಪವಿತ್ರ ಕುರ್ ಆನ್ ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟುಡೇ ಫೌಂಡೇಶನ್ ಫರಂಗಿಪೇಟೆ ಇದರ ಅಧ್ಯಕ್ಷರಾದ ಜನಾಬ್ ಉಮರ್ ಫಾರೂಕ್ ಫರಂಗಿಪೇಟೆ ರವರ ಘನ ಅಧ್ಯಕ್ಷತೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ಪ್ರಸನ್ನ ಕುಮಾರ್ ರವರು ಶಿಬಿರವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪುದು ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಅಸೀಫ್ ಇಕ್ಬಾಲ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷ ಲಿಡಿಯಾ ಪಿಂಟೋ, ಗ್ರಾ ಪಂ ಸದಸ್ಯರಾದ ಇಕ್ಬಾಲ್ ಸುಜೀರ್, ಮಹಮ್ಮದ್ ಫರಂಗಿಪೇಟೆ, ಝಾಹೀರ್ ಅಬ್ಬಾಸ್, ರಿಯಾಝ್ ಕುಂಪನಮಜಲ್, ಭಾಸ್ಕರ್ ರೈ, ಸುಜಾತ ಮಾರಿಪಳ್ಳ, ಹುಸೇನ್ ಪಾಡಿ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಇಂತ್ತಿಯಾಝ್ ತುಂಬೆ, ಅಶ್ರಫ್ ಅರಬಿ ಕಲ್ಲಡ್ಕ, ನಾಸಿರ್ ಬಂಟ್ವಾಳ, ತೇಜಸ್ವಿನಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಅಧಿಕಾರಿ ಶಿಲ್ಪಾ , ಎಫ್.ಎಂ.ಬಶೀರ್, ಇಜಾಝ್ ಬಜಾಲ್, ನಾಸೀರ್ ಬಿ ಸಿ ರೋಡ್, ಜಿಲ್ಲಾ ಯುವ ಕಾಂಗ್ರೆಸ್ ಪ್ರ ಕಾರ್ಯದರ್ಶಿ ಅಬ್ದುಲ್ ಸಮಾದ್, ಯುವ ಕಾಂಗ್ರೆಸ್ ಮಿಲಾಗ್ರೀಸ್ ಘಟಕದ ಅಧ್ಯಕ್ಷ ತೌಸೀಪ್, ಎಮ್.ಕೆ ಮಹಮ್ಮದ್, ಮಾಜೀದ್ ಫರಂಗಿಪೇಟೆ, ಸಲೀಂ ತೆಲ್ಲಿ, ಬಾಫೀ ಫರಂಗಿಪೇಟೆ ಹಾಗೂ ಶಿಬಿರ ಆಯೋಜಿಸಿದ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತಿಯಿದ್ದರು.

ರಕ್ತ ದಾನ ಶಿಬಿರದಲ್ಲಿ ಒಟ್ಟು 80 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಟುಡೇ ಫೌಂಡೇಶನ್ ಫರಂಗಿಪೇಟೆ ತಂಡದ ಸದಸ್ಯರಾದ ರಪೀಕ್ ಪೇರಿಮಾರ್, ಶೌಕತ್ ಆಲಿ ಮಾರಿಪಳ್ಳ, ಮಾಜೀದ್ ಪೇರಿಮಾರ್, ಲತೀಫ್ ಮಲಾರ್, ದಿರ್ಶಾದ್ ಪೇರಿಮಾರ್, ಇನ್ಸಾದ್ ಮಾರಿಪಳ್ಳ ಹಾಗೂ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸರಕಾರಿ ಪ್ರೌಢ ಶಾಲೆ ಶಿಕ್ಷಕರಾದ ಬಿ. ಮಹಮ್ಮದ್ ತುಂಬೆ ಯವರು ಸ್ವಾಗತಿಸಿ ನಿರೂಪಿಸಿದರು.

