ಮಂಗಳೂರು: `ಖಾಸಗಿ ವೈದ್ಯರ ಹಾಗೂ ಆಸ್ಪತ್ರೆಗಳ ಮೇಲೆ ಸರಕಾರದ ನಿಯಂತ್ರಣವಿಲ್ಲದೆ ಸರಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳನ್ನು ಬಲಪಡಿಸದೆ ಇರುವುದರಿಂದ ಬಡವರಿಗೆ ಆರೋಗ್ಯ ಮರಿಚಿಕೆಯಾಗುತ್ತಿದೆ’ ಎಂದು ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಆರೋಪಿಸಿದ್ದಾರೆ. ಸೋಮವಾರ ನಗರದ ಉರ್ವಸ್ಟೋರ್ ಆರೋಗ್ಯ ಉಪಕೇಂದ್ರದ ಅವ್ಯವಸ್ಥೆಯ ವಿರುದ್ಧ ಡಿವೈಎಫ್ಐ ಉರ್ವಸ್ಟೋರ್ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು..
ಆರೋಗ್ಯ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ಅವರ ಕ್ಷೇತ್ರದಲ್ಲಿ ಒಂದೇ ಒಂದು ಸಮುದಾಯ ಆಸ್ಪತ್ರೆ ಇಲ್ಲ. ಸಚಿವರು ಶ್ರೀಮಂತ ಮೆಡಿಕಲ್ ಕಾಲೇಜುಗಳ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೆ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳ ಸುಧಾರಣೆಗಾಗಿ ಡಿವೈಎಫ್ಐ ಹೋರಾಟ ತೀವ್ರಗೊಳಿಸಲಿದೆ ಎಂದು ಹೇಳಿದರು.
ಡಿವೈಎಫ್ಐ ನಗರ ಕಾರ್ಯದಶರ್ಿ ಸಂತೋಷ್ ಬಜಾಲ್, ನಗರ ಜೊತೆ ಕಾರ್ಯದಶರ್ಿ ಪ್ರಶಾಂತ್ ಎಂ.ಬಿ.ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು. ಡಿವೈಎಫ್ಐ ನಗರ ಉಪಾಧ್ಯಕ್ಷ ಮನೋಜ್ ಉರ್ವಸ್ಟೋರ್, ಉರ್ವಸ್ಟೋರ್ ಘಟಕದ ಅಧ್ಯಕ್ಷ ನಾಗೇಂದ್ರ, ಕಾರ್ಯದಶರ್ಿ ಧನರಾಜ್, ಮುಖಂಡರಾದ ಪ್ರಶಾಂತ್ ಆಚಾರ್, ಸನತ್, ಸುಕೇಶ್, ಕೇಶವ ಅಶೋಕ ನಗರ ಉಪಸ್ಥಿತರಿದ್ದರು.

