ಕೈಕಂಬ: ಶಿಕ್ಷಣದ ಆರಂಭ ಅಂಗನವಾಡಿಯಿಂದ ಶುರುವಾಗುತ್ತದೆ. ಮಕ್ಕಳು ಅಂಗನವಾಡಿಯಿಂದ ಶಿಕ್ಷಣ ಪಡೆಯಲು ಶುರು ಮಾಡುವುದರಿಂದ ಇದನ್ನು ಶಿಕ್ಷಣದ ಬುನಾದಿ ಎಂದೂ ಕರೆಯಬಹುದು. ಅಂಗನವಾಡಿಯಲ್ಲಿ ಸಿಗುವ ಶಿಕ್ಷಣದಿಂದ ಭವಿಷ್ಯದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಹೇಳಿದರು. ಅವರು ಕುಪ್ಪೆಪದವಿನ ಕಿಲೆಂಜಾರು ಸಮೀಪದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.anganvadi (1)

ಅವರು ಮಾತನಾಡಿ, ಇಲ್ಲಿ ಒಟ್ಟು 13 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇಂಥಾ ಕಟ್ಟಡ ಸಾಧಾರಣವಾಗಿ ಎಲ್ಲಿಯೂ ಇಲ್ಲ. ಇಲ್ಲಿ ಸಕಲ ಸೌಲಭ್ಯವಿದ್ದು, ಮಕ್ಕಳಿಗೆ ಅನೇಕ ರೀತಿಯಲ್ಲಿ ಸಹಾಯವಾಗಲಿದೆ. ಈ ಕಟ್ಟಡ ನಿರ್ಮಾಣಕ್ಕೆ ಊರವರು ಸರ್ವರೀತಿಯಲ್ಲಿ ಸಹಕರಿಸಿದ್ದಾರೆ ಎಂದು ಕಾರ್ಯನಿರ್ವಹಣಾಧಿಕಾರಿ ಸದನಂದ ತಿಳಿಸಿದರು.anganvadi

ಕಿಲೆಂಜಾರ್‍ನಲ್ಲಿ ಈ ಮುಂಚೆ ಚಿಕ್ಕದೊಂದು ಅಂಗಡಿ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿತ್ತು. ಇದೀಗ ಸುಸಜ್ಜಿತ ಅಂಗನವಾಡಿ ನಿರ್ಮಿಸಿರುವುದರಿಂದ ಸಮಸ್ಯೆ ಬಗೆಹರಿದಿದೆ. ಕುಪ್ಪೆಪದವು ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಂಗನವಾಡಿ ಸಲಹಾ ಸಮಿತಿ ಅಧ್ಯಕ್ಷೆ ವಿಮಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಪ್ಪೆಪದವು ಪಂಚಾಯತ್ ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ, ಕಟ್ಟಡ ಗುತ್ತಿಗೆದಾರ ಹಿರಣ್ಯಾಕ್ಷ ಕೋಟ್ಯಾನ್, ಸದಸ್ಯರಾದ ಅಬೂಬಕ್ಕರ್, ಷರೀಪ್ ಕಜೆ, ಇಂಜಿನಿಯರ್ ರೇಷ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಾಲಿನಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ವಿಜಯಾ ವಂದಿಸಿದರು.

By suddi9

Leave a Reply

Your email address will not be published. Required fields are marked *