ಮೂಡುಬಿದಿರೆ: ಇಲ್ಲಿನ ತೋಡಾರ್ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದ ವತಿಯಿಂದ ವಿದ್ಯಾಲಯದ ಆವರಣದಲ್ಲಿ ತರಹೇವಾರಿ ಗಿಡಗಳನ್ನು ನೆಡುವ ಮೂಲಕ ಆ.4 ಶನಿವಾರ ವನಮಹೋತ್ಸವವನ್ನು ಆಚರಿಸಿದರು.

ವನಮಹೋತ್ಸವ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ವಹಿಸಿದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಜೀವನ್ ಪಿಂಟೋ ವನಮಹೋತ್ಸವದ ಪ್ರಾಮುಖ್ಯತೆಯನ್ನು ವಿವರಿಸುತ್ತಾ “ಹಸಿರು ನಾಡಿನ ಉಸಿರು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಸ್ವಚ್ಛ ಮತ್ತು ಸಮೃದ್ಧ ಪರಿಸರದ ರಕ್ಷಣೆ ಮಾಡಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
