ವಿಟ್ಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ವಿಟ್ಲ ಮಾದರಿ ಶಾಲೆಯಲ್ಲಿ ಜರಗಿತು.
ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆ ಯಾಗಿದೆ. ಹಲವು ಕೌಶಲ್ಯಗಳನ್ನು ಕಲಿಯುವುದರೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶಗಳು ಸ್ಕೌಟ್ಸ್ ಗೈಡ್ಸ್ ಚಳುವಳಿಯಲ್ಲಿ ಇವೆ. ಉತ್ತಮ ನಾಗರೀಕರನ್ನಾಗಿ ರೂಪಿಸಲು ಮಕ್ಕಳನ್ನು ಸ್ಕೌಟ್ಸ್ ಗೈಡ್ಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವುದು ಅವಶ್ಯ ಎಂದು ಮುಖ್ಯ ಅತಿಥಿಗಳಾಗಿದ್ದ ಎನ್.ಜಿ. ಮೋಹನ್ ಹೇಳಿದರು.

ಕಾರ್ಯದರ್ಶಿ ನಾರಾಯಣ ನಾಯಕ್ ವಾರ್ಷಿಕ ವರದಿಯನ್ನು ವಾಚಿಸಿದರು . ಬಿ.ವಿಶ್ವನಾಥ ಗೌಡ ಇವರು ಲೆಕ್ಕ ಪತ್ರವನ್ನು ಮಂಡಿಸಿ ಮಂಜುರಾತಿ ಪಡೆದು ಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥೆಯ ಮುಖ್ಯಾಅಯುಕ್ತರಾದ ಎನ್.ಜಿ ಮೋಹನ್,ಜಿಲ್ಲಾಸ್ಕೌಟ್ ಆಯುಕ್ತರಾದ ರಾಮಶೇಷ ಶೆಟ್ಟಿ ಕೋಶಾದಿಕಾರಿಯಾದ ವಾಸುದೇವ ಬೋಳೂರು, ಮ್ಯಾನೇಜರ್ ಭಾಸ್ಕರ್, ಜಿಲ್ಲಾ ಸಂಘಟಕರಾದ ಭರತ್ ರಾಜ್ , ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ದಂಬೆಕಾನ , ಉಪಾಧ್ಯಕ್ಷರಾದ ಸುದರ್ಶನ ಪಡಿಯಾರ್ , ಸತೀಶ್ ಆಳ್ವ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ರತ್ನಾವತಿ, ವಲಯ ಸಂಪಲ್ಮೂಲ ವ್ಯಕ್ತಿಗಳಾದ ರವಿಪ್ರಸಾದ್ , ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಂತ ಗೈಡ್ ಕ್ಯಾಪ್ಟನ್ ಸ್ವಾಗತಿಸಿದರು. ನರಸಿಂಹ ಭಟ್ಟ ನಿರೂಪಿಸಿದರು. . ಎಲ್ವಿನ್ ಹೆಲೆನ್ ಫುರ್ತಾಡೋ ವಂದಿಸಿದರು.
