ಮೂಡುಬಿದಿರೆ: ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮನ್ನು ಆಳ್ವಾಸ್ ಆಸ್ಪತ್ರೆಯಲ್ಲಿ ಇನ್ನರ್‍ವೀಲ್ ಕ್ಲಬ್ ಪ್ರಾಯೋಜಕತ್ವದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜಿನಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಆಳ್ವಾಸ್ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಹನ ಶೆಟ್ಟಿ ಇವರು ಉದ್ಘಾಟಿಸಿ ಮಾತನಾಡಿ ಸ್ತನ್ಯಪಾನದ ಮಹತ್ವವನ್ನು ವಿವರಿಸಿದರು.

breast feeding (2)

ಇನ್ನರ್‍ವೀಲ್ ಕ್ಲಬ್‍ನ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ ಮಲ್ಯ ಇವರು ತಾಯಿಯಂದಿರಿಗೆ ಎದೆಹಾಲುಣೆಸುವಿಕೆಯ ವಿವರವನ್ನು ನೀಡಿದರು.
ಆಳ್ವಾಸ್ ಆಸ್ಪತ್ರೆ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ರೇವತಿ ಭಟ್ ಮಾತನಾಡಿ, ನಮ್ಮ ವಾತಾವರಣವು ಈಗಿನ ದಿನಗಳಲ್ಲಿ ಹೆಚ್ಚು ವಿಷಕಾರಿಯುತವಾಗಿದ್ದು ಸ್ತನ್ಯಪಾನ ಮಗುವಿಗೆ ಅಮೃತವಿದ್ದಂತೆ, ಮಗು ಎಲ್ಲಾ ರೀತಿಯ ರೋಗ ನಿರೋಧಕ ಶಕ್ತಿಯನ್ನು ಎದೆಹಾಲಿನಿಂದ ಮಾತ್ರ ಪಡೆಯಲು ಸಾಧ್ಯ ಎಂದರು.

breast feeding (1)

ಆಸ್ಪತ್ರೆಯ ಮೇಲಾಧಿಕಾರಿ ಹಾಗೂ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಹರೀಶ್ ನಾಯಕ್ ಮಾತನಾಡಿ, ಪ್ರತಿಯೊಬ್ಬ ತಾಯಿಯು ಸಮತೋಲನ ಆಹಾರ ಸೇವಿಸಿ ತನ್ನ ಆರೋಗ್ಯವನ್ನು ಕಾಪಾಡಿಕೊಂಡು, ಮಗುವಿನ ಆರೈಕೆಯನ್ನು ಹಾಲುಣಿಸುದರ ಮೂಲಕ ಸಮರ್ಪಿಸಬೇಕು ಎಂದು ಹೇಳಿದರು.

ಇನ್ನರ್‍ವೀಲ್ ಕ್ಲಬ್‍ನ ಕಾರ್ಯದರ್ಶಿ ಹಾಗು ಸದಸ್ಯರು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ ಯತಿಕುಮಾರ ಸ್ವಾಮಿ ಗೌಡ, ಉಪ ಪ್ರಾಂಶುಪಾಲೆ ಪ್ರೊ. ಆಶಾ ಸಿಂಥಿಯ ಡೇಸ, ಸಹ ಆಡಳಿತಾಧಿಕಾರಿ ಜೋಬಿನ್ ಜೋಸೆಫ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜೊಸೆಲಿನ್ ಸಾಗತಿಸಿದರು ಹಾಗೂ ನಿರೂಪಿಸಿದರು. ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯ ಶಿಕ್ಷಣವನ್ನು ಕಿರುನಾಟಕದ ಮೂಲಕ ಮನವರಿಕೆ ಮಾಡಿಕೊಟ್ಟರು. ಸ್ತನ್ಯಪಾನದ ಸಂಪೂರ್ಣ ವಿವರಣೆಯನ್ನು ಹಾಗೂ ಆರೋಗ್ಯ ಶಿಕ್ಷಣವನ್ನು ತಿಳಿಸಿಕೊಟ್ಟರು. ಆಸ್ಪತ್ರೆಯಲ್ಲಿ ದಾಖಲಾದ ಎಲ್ಲಾ ತಾಯಂದಿರಿಗೆ ಡಾ. ಹರೀಶ್ ನಾಯಕ್ ಇವರ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *